₹1.5 ಲಕ್ಷ, ಚಿನ್ನಾಭರಣ ದರೋಡೆ: ಸುಮಾರು ‌7 ಮಂದಿ ತಂಡದ ಕೃತ್ಯ: ಹಲ್ಲೆಗೊಳಗಾದ ಮಹಿಳೆ ಪ್ರಾಣಾಪಾಯದಿಂದ ಪಾರು: ಕಾರ್ಕಳ, ಮಾಳ ದರೋಡೆ ಘಟನೆಗೆ ಸಾಮ್ಯತೆ: ಅಪರಾಧ ಕೃತ್ಯಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯ: ದ.ಕ. ಜಿಲ್ಲಾ ಎಸ್.ಪಿ. ಲಕ್ಷ್ಮೀ‌ಪ್ರಸಾದ್ ಹೇಳಿಕೆ

 

ಬೆಳ್ತಂಗಡಿ: ಕೊಕ್ಕಡದಲ್ಲಿ ದರೋಡೆ ಪ್ರಕರಣ ನಡೆದಿದ್ದು. ತುಕ್ರಪ್ಪ ಶೆಟ್ಟಿ ಅವರ ಮನೆಯಲ್ಲಿ ‌ದರೋಡೆ ಪ್ರಕರಣ ನಡೆದಿದ್ದು, ಮಹಿಳೆಗೆ‌ ಚೂರಿ ಇರಿತ ಮಾಡಲಾಗಿತ್ತು. ಸಧ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು ₹ ‌1.5 ಲಕ್ಷ ರೂ‌. ಹಾಗೂ 300 ರಿಂದ 400 ಗ್ರಾಂ. ಚಿನ್ನಾಭರಣ ದರೋಡೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಎಸ್.ಪಿ. ಲಕ್ಷ್ಮೀ ಪ್ರಸಾದ್ ಹೇಳಿದರು.

ಅವರು ಬೆಳ್ತಂಗಡಿ ‌ಠಾಣೆಯಲ್ಲಿ ಕೊಕ್ಕಡ ಬಳಿಯ ಕೊಕ್ರಾಡಿ ದರೋಡೆ ಪ್ರಕರಣದ ಕುರಿತು ಮಾಹಿತಿ ನೀಡಿದರು.

ಮನೆಯ ಮಾಲಕ‌ ತುಕ್ರಪ್ಪ ಶೆಟ್ಟಿ ಅವರು ಮನೆ ನಾಯಿ ಬೊಗಳಿ‌ದ್ದು, ನೋಡಲು ತಮ್ಮ ಮೊದಲ ಮಹಡಿಯಿಂದ ಹೊರಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಮೊದಲ ಮಹಡಿಗೆ ಬಂದು ತುಕ್ರಪ್ಪ ಶೆಟ್ಟಿ ಅವರಿಗೆ ಹಲ್ಲೆ ನಡೆಸಿದರು. ಇದನ್ನು ಗಮನಿಸಿ ಆಗಮಿಸಿದ ಅವರ ಪತ್ನಿಗೂ ಚೂರಿಯಿಂದ ಇರಿದಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಕ್ರಪ್ಪ ಶೆಟ್ಟಿ ಈ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಜೈಪುರದಲ್ಲಿ ನಡೆದ ಘಟನೆ, ಕಾರ್ಕಳದ ಮಾಳದಲ್ಲಿ ನಡೆದ ಘಟನೆಗಳಿಗೂ ಸಾಮ್ಯತೆಯಿದೆ. ಅದೇ ತಂಡ ಕೃತ್ಯ ಎಸಗಿರುವ ಶಂಕೆ ಇದೆ. ಜೈಪುರ ಪ್ರಕರಣದ ಕೆಲ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಅವರನ್ನು ಹುಡುಕಾಟ ಮಾಡುವ ಯತ್ನ ನಡೆಸಲಾಗಿದೆ. ಆದಷ್ಟು ಬೇಗ ಆರೋಪಿಗಳ ಪತ್ತೆ ಮಾಡುವ ವಿಶ್ವಾಸವಿದೆ.

ಒಂಟಿ ಮನೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಿ:
ಪ್ರತ್ಯೇಕವಾಗಿರುವ ಒಂಟಿ ಮನೆಗಳೇ ಕಳ್ಳರ ಟಾರ್ಗೆಟ್ ಆಗಿದೆ. ಸಾಧ್ಯವಾದಷ್ಟು ಇಂತಹ ಮನೆಗಳಿಗೆ ಸಿಸಿ ಕ್ಯಾಮರಾಗಳ ಅಳವಡಿಸುವುದು ಉತ್ತಮ. ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಮುಖ್ಯವಾಗಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಅಥವಾ ಹೊಸಬರು ಊರಿನಲ್ಲಿ ‌ಅನುಮಾನಾಸ್ಪದವಾಗಿ‌ ಕಂಡುಬಂದಲ್ಲಿ ಕೂಡಲೇ ಸ್ಥಳೀಯ ‌ಪೊಲೀಸ್ ಠಾಣೆಗಳಿಗೆ‌ ಮಾಹಿತಿ ನೀಡಿದಲ್ಲಿ ‌ಉತ್ತಮ. ಅಪರಾಧಗಳ ತಡೆಗೆ ಸಾರ್ವಜನಿಕರು ‌ಸಹಕಾರ ನೀಡಬೇಕು ಎಂದರು.

error: Content is protected !!