
ಬೆಳ್ತಂಗಡಿ:ಶ್ರೀ ಮಹಮ್ಮಾಯಿ ದೇವಸ್ಥಾನ ಶಿವಾಜಿನಗರ ಉರುವಾಲು ಶ್ರೀ ದೇವಿಯ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮವು ಮಾ. 4ರಿಂದ 6 ರವರೆಗೆ
ನಡೆಯಲಿರುವುದು.ಎಂದು ಬೆಳ್ತಂಗಡಿ ಶಾಸಕರು ಪ್ರತಿಷ್ಠಾ ಮಹೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಪೂಂಜ ತಿಳಿಸಿದರು.ಅವರು
ಸೋಮವಾರ ಉರುವಾಲು ಪದವಿನ ಮಹಮ್ಮಾಯಿ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಎಡಪದವು ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ಮಂಜುನಾಥ ಭಟ್ ಅಂತರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.ಮಾ 04 ರಂದು ಸಂಜೆ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಮಹಮ್ಮಾಯಿ ದೇವಿ ಹಾಗೂ ಭೈರವನಿಗೆ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. 05 ರಂದು ಬೆಳಿಗ್ಗೆ ಮಹಮ್ಮಾಯಿ ಅಮ್ಮನವರ ಪ್ರತಿಷ್ಠೆ, ಕಲಶನ್ಯಾಸ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಶತಕಲಶಾಭಿಷೇಕ, ಶ್ರೀ ಭೈರವ ಸಾನಿಧ್ಯ, ಶ್ರೀ ಮಹಮ್ಮಾಯಿ ಪ್ರತಿಷ್ಠೆ, ನವಕ ಕಲಶಾಭಿಷೇಕ , ಪರ್ವ ಆರಾಧನೆ, ದುರ್ಗಾ ಹೋಮ , ನಿತ್ಯ ನೈಮಿತ್ತಿಕ ನಡಾವಳಿ ನಿರ್ಣಯ, ಪ್ರಸನ್ನ ಪೂಜೆ ಸಂಜೆ6.30 ರಿಂದ ಕಟೀಲು ಮೇಳದವರಿಂದ ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.06 ರಂದು ಸಂಜೆ ಮಧ್ಯಾಹ್ನ 3 ಗಂಟೆಗೆ ಗೋಂದೋಳು ಪೂಜಾ ವಿಧಿ ವಿಧಾನ ಪ್ರಾರಂಭ, ಗುಮ್ಮಟೆ ಹಾಡು, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದ ನಂತರ ಗೋಂದೋಳು ಪೂಜೆ, ದೇವಿದರ್ಶನ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಈ ಪುಣ್ಯ ಕಾರ್ಯ ಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.
ಪ್ರತಿಷ್ಠಾ ಮಹೋತ್ಸವದ ಕಾರ್ಯಾಧ್ಯಕ್ಷ ಚೆನ್ನಕೇಶವ ಮಾತನಾಡಿ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ದಾರ ಕಾರ್ಯವನ್ನು ಅಂದಾಜಿಸಲಾಗಿದ್ದು ಈಗಾಗಲೇ ಶಾಸಕ ಹರೀಶ್ ಪೂಂಜ, ಹಾಗೂ ದಾನಿಗಳ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಉತ್ಸವಕ್ಕೆ ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು.
ಪ್ರತಿಷ್ಠಾ ಮಹೋತ್ಸವದ ಕಾರ್ಯಾಧ್ಯಕ್ಷ ರಾಘವ ನಾಯ್ಕ ಜಲದುರ್ಗಾ, ಪ್ರಧಾನ ಕಾರ್ಯದರ್ಶಿ ಚಿದಾನಂದ ನಾಯ್ಕ, ಉರುವಾಲು ಮಹಮ್ಮಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ವಿನೋದ್ ನಾಯ್ಕ, ಕಾರ್ಯದರ್ಶಿ ಉಮೇಶ್ ನಾಯ್ಕ ಎಂಜಿರಪಲ್ಕೆ, ಉರುವಾಲು ಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಸೀತಾರಾಮ ನಾಯ್ಕ, ಗೌರವ ಸಲಹೆಗರಾದ ಸೀತಾರಾಮ ಆಳ್ವ ಕೊರಿಂಜ ಹಾಗೂ ಪ್ರಭಾಕರ ಗೌಡ ಪೊಸದೋಂಡಿ ಮತ್ತು ತಣ್ಣೀರುಪಂತ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನೀಲ್ ಅಣಾವು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಪ್ರತಿಷ್ಠಾ ಮಹೋತ್ಸವದ ಕಾರ್ಯಾಧ್ಯಕ್ಷ ಚೆನ್ನಕೇಶವ ಸ್ವಾಗತಿಸಿದರು.