ಶ್ರೀ ಉಮಾಮಹೇಶ್ವರ ದೇವಸ್ಥಾನ ಮಲೆಂಗಲ್ಲು ಕಣಿಯೂರು: ಮಾ01 ರಿಂದ 06 ಮಲೆಂಗಲ್ಲು ಅಷ್ಟಬಂಧ ಬ್ರಹ್ಮಕಲಶೋತ್ಸವ :

 

 

ಬೆಳ್ತಂಗಡಿ:  300 ವರ್ಷಗಳ ಐತಿಹಾಸಿಕ ಹಿನ್ನೆಲೆ ಇರುವ 500 ಅಡಿ ಎತ್ತರದ ಏಕಶಿಲಾ ಮೇಲೆ ಇರುವ ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮಾರ್ಚ್ 01 ರಿಂದ 06 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಬೆಳ್ತಂಗಡಿ ಶಾಸಕ , ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಹರೀಶ್ ಪೂಂಜ‌ ತಿಳಿಸಿದರು.ಅವರು ಸೋಮವಾರ ಮಲೆಂಗಲ್ಲು ದೇವಸ್ಥಾನದ ವಠಾರದಲ್ಲಿ ಕರೆದಿದ್ಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ
ಧರ್ಮಸ್ಥಳದ ಧರ್ಮಾಧಿಕಾರಿ   ವೀರೇಂದ್ರ ಹೆಗ್ಗಡೆಯವರ  ಮಾರ್ಗದರ್ಶನ ದೊಂದಿಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ. 1 ರಿಂದ 6 ರವರೆಗೆ ನಡೆಯಲಿರುವುದು.ಮಾ 01 ರಂದು ಬೆಳಿಗ್ಗೆ ಚೆಂಡೆ ಘೋಷಗಳ ವೈಭಯುತ ಮೆರವಣಿಗೆಯೊಂದಿಗೆ ಹಸಿರು ಹೊರೆ ಕಾಣಿಕೆ ಸಮರ್ಪಣೆ, 02 ರಂದು ಭಜನಾ ಕಾರ್ಯಕ್ರಮದೊಂದಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಮಾ 03 ರಂದು ಸಂಜೆ ಸತೀಶ್ ಶೆಟ್ಟಿ ಪಟ್ಲ ಸಾರಥ್ಯದ ಪಾವಂಜೆ ಮೇಳದಿಂದ ಯಕ್ಷಗಾನ, 04 ರಂದು ರಾತ್ರಿ ಮೈಸೂರು ರಾಮಚಂದ್ರ ಆಚಾರ್ ಇವರಿಂದ ದಾಸವಾಣಿ ಮತ್ತು ಭಕ್ತಿಗೀತೆ, 05 ರಂದು ರಾತ್ರಿ 8.30 ರಿಂದ ವಿಜಯಕುಮಾರ್ ಕೋಡಿಯಲ್ ಬೈಲ್ ವಿರಚಿತ ನಾಟಕ ಛತ್ರಪತಿ ಶಿವಾಜಿ ನಡೆಯಲಿದೆ.06 ರಂದು ಉಮಾಮಹೇಶ್ವರ ದೇವರಿಗೆ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕ, ಶ್ರೀ ಮಹಾಗಣಪತಿ ದೇವರ ಪುನಃ ಪ್ರತಿಷ್ಠೆ , ಸಂಜೆ ರಂಗಪೂಜೆ, ಪಿಲಿಚಾಮುಂಡಿ ದೈವದ ನರ್ತನ ಸೇವೆ ನಡೆಯಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ
ಅನುವಂಶೀಯ ಆಡಳಿತ ಮೊಕ್ತೇಸರಾದ ಚಿದಾನಂದ ರಾವ್ ಕೊಲ್ಲಾಜೆ, ಆಡಳಿತ ಮಂಡಳಿ ಅಧ್ಯಕ್ಷ ಸದಾನಂದ ಮೇಲಾಂಟ ಮೊಗರೋಡಿ, ಕಾರ್ಯದರ್ಶಿ ಜಿತೇಶ್ ಜೈನ್, ಕೋಶಾಧಿಕಾರಿ ರಕ್ಷಿತ್ ಪಣೆಕ್ಕರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಠ್ಠಲ ಶೆಟ್ಟಿ ಕೊಲ್ಲೊಟ್ಟು, ಕಲಶ ಸಮಿತಿ ಸಂಚಾಲಕಿ ಶಾರದಾ ಆರ್ ರೖ ಮುಗೆರೋಡಿ ಹಾಗೂ ಪ್ರಚಾರ ಸಮಿತಿ ಸಂಚಾಲಕ ಪ್ರದೀಪ್ ಶೆಟ್ಟಿ ಮಲೆಂಗಲ್ಲು ಉಪಸ್ಥಿತರಿದ್ದರು. ಬ್ರಹ್ಮಕಲಶೊತ್ಸವ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಗೌಡ ಮುಚ್ಚೂರು ಸ್ವಾಗತಿಸಿದರು.

error: Content is protected !!