ಬೆಳ್ತಂಗಡಿ: ಸಂಘದ ಕಾರ್ಯಚಟುವಟಿಕೆಗಳು ಪಾರದರ್ಶಕವಾಗಿ ನಡೆಯುತ್ತಿದೆ. ಈ ಸಂದರ್ಭ ಮಾಸಿಕ ಸಭೆ ಹಾಗೂ ದಾಕಲಾತಿ ನಿರ್ವಹಣೆ ಮೊದಲಾದ ವಿಚಾರಗಳಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಅಗತ್ಯ. ಮುಖ್ಯವಾಗಿ ಸಂಘದ ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ. ಪದಾಧಿಕಾರಿಗಳು ಸಂಘದ ಏಳಿಗೆಗೆ ಬೇಕಾದ ವಿಚಾರಗಳನ್ನು ಮುಕ್ತವಾಗ ಹಂಚಿಕೊಂಡು ಕಾರ್ಯ ನಿರ್ವಹಣೆಗೆ ಬೇಕಾದ ಯೋಜನೆಗಳನ್ನು ಸಿದ್ಧಪಡಿಸಿ ಕಾರ್ಯನಿರ್ವಹಿಸಿದಾಗ ಸಂಘ ಹೆಚ್ಚು ಬೆಳೆಯಲು ಸಾಧ್ಯ ಎಂದು ತಾಲೂಕು ಯುವ ಮರಾಟಿ ಸೇವಾ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಲಾಯಿಲಾ ತಿಳಿಸಿದರು.
ಅವರು ಗುರುವಾಯನಕೆರೆಯಲ್ಲಿ ತಾಲೂಕು ಯುವ ಮರಾಟಿ ಸೇವಾ ಸಂಘ ಹಮ್ಮಿಕೊಂಡಿದ್ದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಪದಾಧಿಕಾರಿಗಳು ಉತ್ಸಾಹದಿಂದ ಭಾಗವಹಿಸಿ ಅಮೂಲ್ಯ ಸಲಹೆಗಳನ್ನು ನೀಡಬೇಕು. ಮುಖ್ಯವಾಗಿ ವಹಿಸಿರುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದಲ್ಲಿ ಸಮಘ ಅಭಿವೃದ್ಧಿ ಹೊಂದಲು ಸಾಧ್ಯ. ಗ್ರಾಮಮಟ್ಟದಲ್ಲಿ ಸಂಘವನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಯಬೇಕಿದೆ ಎಂದರು.
ಉಪಾಧ್ಯಕ್ಷ ವಸಂತ ನಾಯ್ಕ್, ಕಾರ್ಯದರ್ಶಿಗಳಾದ ತಾರನಾಥ ನಾಯ್ಕ್, ಶರತ್ ಗೇರುಕಟ್ಟೆ, ಸಾಂಸ್ಕತಿಕ ಕಾರ್ಯದರ್ಶಿ ಸಚಿನ್ ಗಿಳಿಕಾಪು, ಮಾಧ್ಯಮ ಕಾರ್ಯದರ್ಶಿಗಳಾದ ಹರ್ಷಿತ್ ಪಿಂಡಿವನ, ಪ್ರಶಾಂತ್ ತೆಂಕಕಾರಂದೂರು, ಕಾರ್ಯಕಾರಿ ಸಮಿತಿಯ ಪ್ರಮೋದ್, ಲವಿನಾ ಕೆ.ಬಿ., ಹರಿಪ್ರಸಾದ್ ಶಿಶಿಲ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಉಮೇಶ್ ನಾಯ್ಕ್ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ಸತೀಶ್ ಹೆಚ್.ಎಲ್. ವಂದಿಸಿದರು.