ಉಗ್ರ ಪರ ಗೋಡೆ ಬರಹ: ಸಂಶಯಸ್ಪದ ವ್ಯಕ್ತಿ ಪೊಲೀಸ್ ವಶಕ್ಕೆ

ಮಂಗಳೂರು: ನಗರದಲ್ಲಿ ಉಗ್ರ ಪರ ಗೋಡೆ ಬರಹ ಬರೆದ ಪ್ರಕರಣದಲ್ಲಿ ಪೊಲೀಸರು ಓರ್ವ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ನವೆಂಬರ್ 27ರಂದು ನಗರದ ಬಿಜೈ ಮ್ಯೂಸಿಯಂ ಬಳಿಯ ಫ್ಲಾಟ್ ಒಂದರ ಅವರಣದ ಗೋಡೆಯ ಹೊರ ಭಾಗದಲ್ಲಿ ಲಷ್ಕರ್ ಉಗ್ರರನ್ನು ಬೆಂಬಲಿಸಿ ಅಕ್ಷೇಪಾರ್ಹ ಬರಹ ಬರೆಯಲಾಗಿತ್ತು.ಇದಾದ ಎರಡು ದಿನಗಳ ನಂತರ ನ. 29 ಮಂಗಳೂರಿನ ನ್ಯಾಯಾಲಯದ ರಸ್ತೆಯ ಆವರಣದಲ್ಲಿರುವ ಕಟ್ಟಡದ ಗೋಡೆಯ ಮೇಲೆ ಉರ್ದು ಭಾಷೆಯಲ್ಲಿ ವಿವಾದಾತ್ಮಕ ಬರಹ ಬರೆಯಲಾಗಿತ್ತು. ಈ ಸಂಬಂಧ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ತನಿಖೆ ನಡೆಸುತಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.

error: Content is protected !!