
ಬೆಳ್ತಂಗಡಿ:ಬಳೆಂಜ ಶಾಲಾ ಮಕ್ಕಳನ್ನು ಟಿಪ್ಪರ್ ಹಾಗೂ ಪಿಕಪ್ ವಾಹನದಲ್ಲಿ ಅಧ್ಯಯನ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಫೆ.12 ರಂದು ಅಮಾನತು ಆಗಿದ್ದ ಬಳೆಂಜ ಶಾಲೆಯ ಶಿಕ್ಷಕ ಕಿರಣ್ ಕುಮಾರ್ ಅವರನ್ನು ಫೆ.18ರಂದು ಕಳಿಯ ಗ್ರಾಮದ ಕೊರಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕನಾಗಿ ನೇಮಕ ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.