ಬೆಳ್ತಂಗಡಿ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಪಡೆದಿರುವ ನಾಡಿನ ಸರ್ವಧರ್ಮೀಯರ ಸೌಹಾರ್ದತೆಯ ಸಮನ್ವಯ ಕ್ಷೇತ್ರ ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇಲ್ಲಿನ 2021ನೇ ಸಾಲಿನ ಉರೂಸ್ ಫೆ.19ರಿಂದ 28ರವರೆಗೆ ನಡೆಯಲಿದೆ.
ದರ್ಗಾ ಶರೀಫ್ ನಲ್ಲಿ ಇತ್ತೀಚೆಗೆ ನಡೆದ ಕಾಜೂರು -ಕಿಲ್ಲೂರು ಜಂಟಿ ಉರೂಸ್ ಸಮಿತಿಯ ಸಭೆಯಲ್ಲಿ ಕಾಜೂರ್ ಸಮಿತಿಯ ಗೌರವಾಧ್ಯಕ್ಷ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ದಿನಾಂಕ ಪ್ರಕಟಿಸಿದ್ದಾರೆ.
ಕಾಜೂರು ಕ್ಷೇತ್ರದ ಖಾಝಿ, ತಾಜುಲ್ ಉಲಮಾರ ಪುತ್ರ ಸೈಯದ್ ಕೂರತ್ ತಂಙಳ್ ಮಾರ್ಗದರ್ಶನದಲ್ಲಿ, ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಸಯ್ಯಿದ್ ಕಾಜೂರು ತಂಙಳ್ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.
ಕೋವಿಡ್ ನಿಮಿತ್ತ ಸರಕಾರ ಮತ್ತು ಆರೋಗ್ಯ ಇಲಾಖೆ ನಿಯಮಾವಳಿಯಂತೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆಸಲು ಕುಂಬೋಳ್ ತಂಙಳ್ ಮತ್ತು ಕೂರತ್ ತಂಙಳ್ ನಿರ್ದೇಶನ ನೀಡಿದ್ದಾರೆ.
ಕಾಜೂರು- ಕಿಲ್ಲೂರು ಜಂಟಿ ಉರೂಸ್ ಸಮಿತಿ ಸಮಾಲೋಚನಾ ಸಭೆಯಲ್ಲಿ, ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಕಾಜೂರು, ಉಪಾಧ್ಯಕ್ಷ ಕೆ. ಮುಹಮ್ಮದ್ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಹೆಚ್. ಅಬೂಬಕ್ಕರ್ ಸಿದ್ದೀಕ್ ಕಾಜೂರ್ , ಜೊತೆ ಕಾರ್ಯದರ್ಶಿ ಎಂ. ಎ. ಕಾಸಿಂ ಮಲ್ಲಿಗೆಮನೆ, ಕೋಶಾಧಿಕಾರಿ ಮುಹಮ್ಮದ್ ಕಮಾಲ್ ಕಾಜೂರು, ಉರೂಸ್ ಸಮಿತಿ ಸದಸ್ಯರಾದ ಅಬ್ದುಲ್ ರಹಿಮಾನ್ ಕಾಜೂರು, ಬದ್ರುದ್ದೀನ್ ಕಾಜೂರು, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕಿಲ್ಲೂರು, ಎಚ್.ಎನ್. ಮುಹಮ್ಮದ್ ಹನೀಫ್ ಕಿಲ್ಲೂರು, ಎ. ಮುಹಮ್ಮದ್ ಅಲಿ ಕಾಜೂರು, ಎನ್.ಎಂ. ಯಾಕೂಬ್ ಕಾಜೂರು, ಸುಲೈಮಾನ್ ಕಿಲ್ಲೂರು, ಉಮರ್ ಕುಂಞಿ ಕಾಜೂರು, ಕೆ.ಹೆಚ್. ಸಿದ್ದೀಕ್ ಕಾಜೂರು, ಕೆ.ಹೆಚ್. ಅಬ್ಬಾಸ್ ಕಾಜೂರು ಮೊದಲಾದವರು ಭಾಗವಹಿಸಿದ್ದರು.