
ಬೆಳ್ತಂಗಡಿ.ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ವರ್ಷಾವಧಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಜಮಾ ಖರ್ಚಿನ ಬಗ್ಗೆ ಭಕ್ತಾದಿಗಳ ಸಾರ್ವಜನಿಕ ಸಭೆಯು ದೇವಸ್ಥಾನ ಸಭಾಂಗಣದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ಫೆ 15 ರಂದು ನಡೆಯಿತು.
ನಾಳ ದೇವಸ್ಥಾನದ ಪ್ರಬಂಧಕ ಗಿರೀಶ್ ಜಿ.ಎಸ್. ಜಾತ್ರಾ ಮಹೋತ್ಸವ ಜಮಾ ಖರ್ಚಿನ ವಿವರ ಸಭೆಯಲ್ಲಿ ಮಂಡಿಸಿದಾಗ ವ್ಯವಸ್ಥಾಪನಾ ಸಮಿತಿಯ ಸದಸ್ಯ ಮೈಸೂರಿನ ಉದ್ಯಮಿ ಲ| ಹೇಮಂತ್ ಕುಮಾರ್ ಗೇರುಕಟ್ಟೆ ಅವರು ಕೆಲವೊಂದು ಖರ್ಚುಗಳ ಹಣವನ್ನು ನಗದು ಮೂಲಕ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ, ದೊಡ್ಡ ಮೊತ್ತದ ಹಣವನ್ನು ಚೆಕ್ ಮೂಲಕ ಯಾಕೆ ನೀಡಿಲ್ಲ ಅದಲ್ಲದೇ ಬಿಲ್ ನೀಡದೇ ಎಸ್ಟಿಮೇಟ್ ನೀಡಿದವರಿಗೂ ಎಲ್ಲಾ ಹಣ ಸಂದಾಯ ಮಾಡಿದ್ದೀರಿ, ಕಳೆದ ವರ್ಷದ ಜಾತ್ರೆ ಸಮಯದಲ್ಲಿ ವಸ್ತು ರೂಪದಲ್ಲಿ ನೀಡಿದ ಕೊಡುಗೆಯನ್ನು ಜಾತ್ರೆ ದೇಣಿಗೆ ಎಂದು ನಗದು ನೀಡದೆ ಜಾತ್ರೆ ಆಮಂತ್ರಣ ಪತ್ರದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಹೆಸರನ್ನು ಮುದ್ರಿಸಲಾಗಿದೆ.
ಎಸ್ಟಿಮೇಟ್ ಗೂ,ಬಿಲ್ ಗೂ,
ವ್ಯತ್ಯಾಸ ಇದೆ.ಈ ರೀತಿಯಾದರೆ ಮುಂದೆ ಸಮಿತಿಯ ಸದಸ್ಯರೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ನಿಬಂಧನೆಗಳಂತೆ ನಾವು ಹೊಣೆಯಾಗುತ್ತೇವೆ.ಅದ್ದರಿಂದ ಲೆಕ್ಕಚ್ಚಾರಕ್ಕೆ ನನ್ನ ಆಕ್ಷೇಪ ಇದೆ ಎಂದು ಸಭೆಯಲ್ಲಿ ದಾಖಲೆ ಸಮೇತವಾಗಿ ನೀಡಿ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಸಭೆಯಲ್ಲಿದ್ದವರೆಲ್ಲರೂ ಅವರ ಮಾತಿಗೆ ಧ್ವನಿಗೂಡಿಸಿ, ಸಾರ್ವಜನಿಕರ ಹಣ ಹಾಗೂ ದೇಣಿಗೆಯ ಲೆಕ್ಕಚ್ಛಾರ ಪಾರದರ್ಶಕ ವಾಗಿರಬೇಕು ಮುಂದೆ ಈ ರೀತಿ ತಪ್ಪು ಆಗದಂತೆ ನೋಡಿಕೊಳ್ಳಿ ಎಂದರು.ದೇವಸ್ಥಾನದ ಚಿಕ್ಕ ಮೇಳದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಂಬಂಧಿಸಿದ ವ್ಯಕ್ತಿಗೆ ನೋಟಿಸ್ ನೀಡುವಂತೆ ತಿಳಿಸಲಾಗಿತ್ತು ಎಂದು ಸಭೆಯಲ್ಲಿ ಚರ್ಚೆಯಾದಾಗ ನೋಟೀಸ್ ನೀಡಲಾಗಿದೆ. ಅವರಿಂದ ಉತ್ತರ ಬಂದಿರುವುದಿಲ್ಲ ಎಂದು ಅಧ್ಯಕ್ಷ ಬಿ.ಹರೀಶ್ ಕುಮಾರ್ ಸಭೆಗೆ ತಿಳಿಸಿದರು. ಮುಂದಿನ ವರ್ಷದಲ್ಲಿ ಬ್ರಹ್ಮ ಕಲಶೋತ್ಸವ ಸಮೀಪಿಸುತ್ತಿದೆ.ಭಕ್ತರಿಗೆ ದೇವಸ್ಥಾನದ ಬಗ್ಗೆ ಭಕ್ತಿ ಮೂಡಿಸುವ ನಿಟ್ಟಿನಲ್ಲಿ ವ್ಯವಸ್ಥಾಪನ ಸಮಿತಿ ಹಾಗೂ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಪಾರದರ್ಶಕವಾದ ಕೆಲಸವನ್ನು ಮಾಡಬೇಕು ಆಗ ಮಾತ್ರ ಮುಂದಿನ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಜಾಸ್ತಿ ಆಗುತ್ತದೆ ಎಂದು ರೈಲ್ವೆ ಇಲಾಖೆ ನಿವೃತ ಅಧಿಕಾರಿ ಕೃಷ್ಣ ಕೆ.ಕುಂಟಿನಿ ತಿಳಿಸಿದರು.
ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಭುವನೇಶ್ ಜಿ,ಮಾಜಿ ಹಿರಿಯ ಸದಸ್ಯರಾದ ಜನಾರ್ದನ ಪೂಜಾರಿ, ಜಾತ್ರಾ ಮಹೋತ್ಸ ಸಮಿತಿ ಸದಸ್ಯರಾದ ರಘುರಾಮ ಭಟ್,ಶೇಖರ ನಾಯ್ಕ, ರಾಜೇಶ್ ಪೆಂರ್ಬುಡ,ಆಶೋಕ ಆಚಾರ್ಯ, ಬಾಲಕೃಷ್ಣ ಶೆಟ್ಟಿ, ಕೆಲವೊಂದು ಸಲಹೆ ,ಸೂಚನೆಗಳನ್ನು ನೀಡಿದರು. ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಸಿಕೊಂಡು ಬರಲು ಸಹಕರಿಸಿದ ಎಲ್ಲಾ ದಾನಿಗಳು ಮತ್ತು ಭಕ್ತರನ್ನು ಸ್ಮರಿಸಿ ಕೊಂಡರು.
ಈ ಸಂದರ್ಭದಲ್ಲಿ ಆಗಿರುವ ಕೆಲವೊಂದು ತಪ್ಪುಗಳನ್ನು ಸರಿಪಡಿಸಿ ಕೊಂಡು ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರ ಸಹಕಾರವನ್ನು ಕೇಳಿದರು.ಕೊನೆಯಲ್ಲಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಎಲ್ಲರ ಸಹಕಾರದಲ್ಲಿ ಜಾತ್ರಾ ಮಹೋತ್ಸವವು ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದರು. ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣರು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ, ಅರುಣ್ ಶೆಟ್ಟಿ, ರೀತಾ ಪಿ.,ಮೋಹಿನಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಎಂ.,ನಾಳ ಭಜನೆ ಮಂಡಳಿ ಅಧ್ಯಕ್ಷ ಗಣೇಶ್ ಎನ್., ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷ ಮಮತಾ ಆಳ್ವ ಉಪಸ್ಥಿತರಿದ್ದರು.ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು ಮತ್ತಿತರರಿದ್ದರು.