ಸಾಕುನಾಯಿ ಹತ್ಯೆ: ದರೋಡೆ ಯತ್ನ: ಅಪರಿಚಿತರು ಪರಾರಿ

ಉಜಿರೆ: ಕಲ್ಮಂಜ ಗ್ರಾಮದ ನಿಡಿಗಲ್ ಬಳಿಯ ಮನೆಯೊಂದಕ್ಕೆ ಅರಿಚಿತರು, ಮಾರಕಾಸ್ತ್ರಗಳೊಂದಿಗೆ ತೆರಳಿ ಸಾಕುನಾಯಿ ಹತ್ಯೆ ಮಾಡಿದ್ದು, ಮನೆಯ ಹಿಂಬದಿ ಬಾಗಿಲು ಒಡೆದು, ದರೋಡೆ ಮಾಡುವ ಸಂಚು ವಿಫಲವಾಗಿದೆ.
ನಾಲ್ಕು ಜನ ಅಪರಿಚಿತರ ಗುಂಪು‌ ನ.13ರಂದು ಮುಂಜಾನೆ 2 ಗಂಟೆ ಸುಮಾರಿಗೆ ನಿಡಿಗಲ್ ನ‌ ಮನೆ ಆವರಣಕ್ಕೆ ಮಾರಕಾಸ್ತ್ರಗಳ ಜೊತೆ ಆಗಮಿಸಿದ್ದಾರೆ. ಈ ವೇಳೆ ‌ಮನೆಯ ಸಾಕುನಾಯಿ ಬೊಗಳುತ್ತಿದ್ದುದನ್ನು ಗಮನಿಸಿ ಹತ್ಯೆ ಮಾಡಿದ್ದಾರೆ.‌ ಬಳಿಕ ಮನೆಯ ಹಿಂಬದಿ ಬಾಗಿಲನ್ನು ಒಡೆದು ಮನೆಯೊಳಗೆ ನುಗ್ಗುವ ಯತ್ನ ಮಾಡಿದ್ದಾರೆ, ಆದರೆ ಶಬ್ದ ಕೇಳಿ ಎಚ್ಚೆತ್ತ ಮನೆಯವರು, ಅಪರಿಚಿತರನ್ನು ಕಂಡು ಜೋರಾಗಿ ಕಿರುಚಿದ್ದಾರೆ. ಇದರಿಂದ ವಿಚಲಿತರಾದ ಅಪರಿಚಿತರು ತಮ್ಮ ಕಾರಿನಲ್ಲಿ ಪರಾರಿಯಾಗಿದ್ದಾರೆ. ಪ್ರಕರಣ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದೆ.

error: Content is protected !!