ರೋಟರಿ ಕ್ಲಬ್ ಬೆಳ್ತಂಗಡಿ: ಪ್ರಕಾಶ ಗಾನಾಂಜಲಿ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ವಲಯ 4ರ ಕ್ಲಬ್ ಗಳ ಹಾಡುಗಾರಿಕಾ ಸ್ಪರ್ಧೆ ಪ್ರಕಾಶ ಗಾನಾಂಜಲಿ ಬೆಳ್ತಂಗಡಿಯ ಸುಬ್ರಹ್ಮಣ್ಯ ಸದನದಲ್ಲಿ ನಡೆಯಿತು . ರೋಟರಿ ಜಿಲ್ಲೆ 3181, ವಲಯ 4ರ ಸಮಾರು 10 ಕ್ಲಬ್ ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಇತ್ತೀಚೆಗೆ ನಿಧನರಾದ ಗಾಯಕ, ಪ್ರಕಾಶ್ ತುಳುಪುಳೆ ಅವರ ನೆನಪಿನಲ್ಲಿ ಈ ಸ್ಪರ್ಧೆಯನ್ನು ಅಯೋಜಿಸಿ, ಇದಕ್ಕೆ ಪ್ರಕಾಶ ಗಾನಂಜಲಿ ಎಂದು ಹೆಸರಿಸಲಾಗಿತ್ತು‌. ಕಾರ್ಯಕ್ರಮವನ್ನು ಪ್ರಕಾಶ ತುಳುಪುಳೆಯವರ ಸಹೋದರ ಡಾ. ಎನ್.ಎಂ.ತುಳುಪುಳೆ ಅವರು ಉದ್ಘಾಟಿಸಿದರು.
ಉಜಿರೆಯ ರವಿಚಂದ್ರ ಚೆಕ್ಕಿತ್ತಾಯ, ಅರವಿಂದ ಕಾರಂತ, ವಿವೇಕ ಸಂಪತ್ ಆರಿಗ, ಸುಹಾಸ್ ಕುಮಾರ್ ಎಸ್. ಹಾಗೂ ರೊನಾಲ್ಡೊ ಲೋಬೋ ಅವರನ್ನು ರೋಟರಿ ಕ್ಲಬ್ ಗೆ ಸೇರಿಸಿಕೊಳ್ಳಲಾಯಿತು. ಸ್ಪರ್ಧೆಯಲ್ಲಿ ಗಾಯಕರಾದ ಸುಬ್ರಹ್ಮಣ್ಯ, ರಜತ್ ಮಯ್ಯ ಹಾಗೂ ಸ್ವರ್ಣ ಕುಮಾರಿ ಅವರು ನಿರ್ಣಾಯಕರಾಗಿ ಸಹಕರಿಸಿದರು.
ಈ ಸಂದರ್ಭದಲ್ಲಿ ರೋಟರಿ ಜಿಲ್ಲೆಯ ಸಿಂಗಿಂಗ್ ಐಡಲ್ ಚೇರ್ಮನ್ ವಿ.ಜೆ.ಫರ್ನಾಂಡೀಸ್ , ಜೋನಲ್ ಲೆಫ್ಟಿನೆಂಟ್ ಮೋನಪ್ಪ ಪೂಜಾರಿ ಕಂಡೆಂತ್ಯಾರು, ಬೆಳ್ತಂಗಡಿ ರೋಟರಿ ಪೂರ್ವಾಧ್ಯಕ್ಷ ಡಾ.ಶಶಿಧರ ಡೋಂಗ್ರೆ, ಕ್ಲಬ್ ನ ನಿಯೋಜಿತ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಹಾಗೂ ಕ್ಲಬ್ ಸರ್ವಿಸಸ್ ನ ನಿರ್ದೇಶಕ ಯೋಗೀಶ್ ಭಿಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಲಬ್ ನ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ಅವರು ಪ್ರಸ್ತಾವಿಸಿ, ಸ್ವಾಗತಿಸಿದರು. ಕ್ಲಬ್ ನ ಕಾರ್ಯದರ್ಶಿ ಶ್ರೀಧರ ಕೆವಿ ವಂದಿಸಿದರು.

error: Content is protected !!