ಜ.3 ಹಾಗೂ ಜ.4ರಂದು ನಲಿಕೆ ಸಮಾಜ ಬಾಂಧವರ 5 ಓವರ್‌ಗಳ 7 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್‌ ಪಂದ್ಯಾಟ : ಮಾರಿಗುಡಿ ಫ್ರೆಂಡ್ಸ್ ಟ್ರೋಫಿ – 2026

 

 

ಬೆಳ್ತಂಗಡಿ: ನಲಿಕೆ ಸಮಾಜ ಬಾಂಧವರ 5 ಓವರ್‌ಗಳ 7 ಜನರ
ಹೊನಲು ಬೆಳಕಿನ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್‌ ಪಂದ್ಯಾಟ ಮಾರಿಗುಡಿ ಫ್ರೆಂಡ್ಸ್ ಟ್ರೋಫಿ – 2026 ಜ.3 ಹಾಗೂ ಜ.4ರಂದು ಶನಿವಾರ ಮತ್ತು ಆದಿತ್ಯವಾರ
ತಾಲೂಕು ಕ್ರೀಡಾಂಗಣ ಬೆಳ್ತಂಗಡಿಯಲ್ಲಿ ಜರುಗಲಿದೆ ಎಂದು ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಕೋಡಿ ಹೇಳಿದರು.
ಅವರು ಜೈ.1ರಂದು ಬೆಳ್ತಂಗಡಿ ಪ್ರೇಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,
ಜ.3ರಂದು‌ ಶನಿವಾರ ಸಂಜೆ ಗಂಟೆ 7.00ಕ್ಕೆ ಉದ್ಘಾಟನೆಯನ್ನು ಹರೀಶ್ ಪೂಂಜ ಶಾಸಕರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವಹಿಸಲಿದ್ದು,
ಅಧ್ಯಕ್ಷತೆಯನ್ನು ಶಶಿ ಬಂಗಾಡಿ ದೈವ ನರ್ತಕರು ವಹಿಸಲಿದ್ದಾರೆ.
ಅಂಬೇಡ್ಕರ್ ಭಾವಚಿತ್ರಕ್ಕೆ
ಮಾಲಾರ್ಪಣೆಯನ್ನು ಯು. ಟಿ. ಖಾದರ್ ಫರೀದ್ ಸಭಾಧ್ಯಕ್ಷರು, ವಿಧಾನಸಭೆ ಕರ್ನಾಟಕ ಸರಕಾರ, ಟ್ರೋಫಿ ಅನಾವರಣವನ್ನು ಕೆ. ಹರೀಶ್ ಕುಮಾರ್ ಅಧ್ಯಕ್ಷರು, ಮೆಸ್ಕಾಂ ನಿಗಮ ಮಂಗಳೂರು ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳು ಕೆ. ಗಂಗಾಧರ ಗೌಡ ಮಾಜಿ ಸಚಿವರು, ಕರ್ನಾಟಕ ಸರ್ಕಾರ, ಶಶಿಧರ ಶೆಟ್ಟಿ ನವಶಕ್ತಿ ಉದ್ಯಮಿಗಳು ಬರೋಡ,
ಕಿರಣ್‌ಂದ್ರ ಪುಷ್ಪಗಿರಿ ಧಾರ್ಮಿಕ ಮುಖಂಡರು, ಸುಮಂತ್ ಕುಮಾರ್ ಬಿ. ಜೈನ್ ಅಧ್ಯಕ್ಷರು, ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆ, ಗುರುವಾಯನಕೆರೆ,
ಸುಬ್ಬಾಪುರ್ ಮಠ ಪೊಲೀಸ್ ನಿರೀಕ್ಷಕರು, ಬೆಳ್ತಂಗಡಿ ಪೊಲೀಸ್ ಠಾಣೆ,
ಪ್ರಭಾಕರ ಶಾಂತಿಕೋಡಿ ಅಧ್ಯಕ್ಷರು, ನಲಿಕೆಯವರ ಸಮಾಜ ಸೇವಾ ಸಂಘ ಬೆಳ್ತಂಗಡಿ, ಬಿ. ಎಸ್. ಸುಂದರ್ ಭಾರತೀಯ ತೈಲ ನಿಗಮ, ಮಂಗಳೂರು, ನವೀನ್ ನೆರಿಯ ಜಿಲ್ಲಾ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್‌ ಪುತ್ತೂರು ಜಿಲ್ಲೆ, ಪ್ರಸಾದ್‌ ಶೆಟ್ಟಿ ಏಣಿಂಜೆ, ಅಧ್ಯಕ್ಷರು, ಪತ್ರಕರ್ತರ ಸಂಘ, ಬೆಳ್ತಂಗಡಿ, ಕರುಣಾಕರ ಬಂಗೇರ ಬೆಳ್ತಂಗಡಿ, ಗಣೇಶ್ ಕಕ್ಕಿಂಜೆ ಉದ್ಯಮಿಗಳು ಭಾಗವಹಿಸಲಿದ್ದಾರೆ.
‌ಜ.4ರಂದು ಬೆಳಿಗ್ಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ
ಅತಿಥಿಗಳಾಗಿ ರಕ್ಷಿತ್ ಶಿವರಾಂ ಪ್ರಧಾನ ಕಾರ್ಯದರ್ಶಿ, ಕೆ.ಪಿ.ಸಿ.ಸಿ. ಬೆಂಗಳೂರು,
ಸಿದ್ದು ಪಾಣರ ದೈವ ನರ್ತಕರು,
ರಮೇಶ್ ರೆಂಕೆದಗುತ್ತು ಸಂಚಾಲಕರು, ಡಿ.ಎಸ್.ಎಸ್. (ಅಂಬೇಡ್ಕ‌ರ್ ವಾದ) ಬೆಳ್ತಂಗಡಿ, ಪ್ರಭಾಕರ ಶಾಂತಿಕೋಡಿ ಅಧ್ಯಕ್ಷರು, ನಲಿಕೆಯವರ ಸಮಾಜ ಸೇವಾ ಸಂಘ ಬೆಳ್ತಂಗಡಿ,
ಅಕ್ಟರ್ ಸಂಜಯನಗರ ಅಧ್ಯಕ್ಷರು, ಎಸ್.ಡಿ.ಪಿ.ಐ. ಕ್ಷೇತ್ರ ಸಮಿತಿ ಬೆಳ್ತಂಗಡಿ, ಶ್ಯಾಮ್ ಬೆಳ್ತಂಗಡಿ ಮಾಲಕರು
ಶಾಸ್ತ್ರ ಸೌಂಡ್ಸ್ ಬೆಳ್ತಂಗಡಿ,
ವಸಂತ್ ಬಿ.ಕೆ. ಮೈಸೂರು ವಿಭಾಗೀಯ ಸಂಚಾಲಕರು, ಡಿ.ಎಸ್.ಎಸ್. (ಅಂಬೇಡ್ಕರ್ ವಾದ) ಬೆಳ್ತಂಗಡಿ, ಮೆಹಬೂಬ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕ ಬೆಳ್ತಂಗಡಿ (ನಗರ), ರಾಮು ಶಿಶಿಲ ಉಪಾಧ್ಯಕ್ಷರು, ನಲಿಕೆಯವರ ಸಮಾಜ ಸೇವಾ ಸಂಘ ಬೆಳ್ತಂಗಡಿ, ರವಿ ಮುಂಡತ್ತೋಡಿ ಉಜಿರೆ, ರಮೇಶ್ ಅಜ್ಜಿಬೆಟ್ಟು ಹಿರಿಯ ದೈವ ನರ್ತಕರು, ಶೀನ ಮೂಡುಶೆಡ್ಡೆ ಹಿರಿಯ ದೈವ ನರ್ತಕರು, ಯಶವಂತ್ ಎಸ್.ಡಿ.ಎಂ. ಕಾಲೇಜು ಉಜಿರೆ, ಸುಂದರ ಬಿರಾವ್ ಹಿರಿಯ ದೈವ ನರ್ತಕರು,
ಆನಂದ ಬಿರಾವ್ ಹಿರಿಯ ದೈವ ನರ್ತಕರು ಭಾಗವಹಿಸಲಿರುವರು. ಒಟ್ಟು 26 ತಂಡಗಳು ಭಾಗವಹಿಸಲಿದ್ದು, ಪ್ರಥಮ ರೂ. 20 ಸಾವಿರ ನಗದು ಹಾಗೂ ಶ್ರೀ ಮಾರಿಗುಡಿ ಟ್ರೋಫಿ, ದ್ವಿತೀಯ ರೂ. 10 ಸಾವಿರ ನಗದು ಮತ್ತು ಶ್ರೀ ಮಾರಿಗುಡಿ ಟ್ರೋಫಿ, ತೃತೀಯ ರೂ. ಶ್ರೀ ಮಾರಿಗುಡಿ ಟ್ರೋಫಿ ಜೊತೆಗೆ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್ ಮ್ಯಾನ್, ಸವ್ಯಸಾಚಿ ಆಟಗಾರರನ್ನು ಗುರುತಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಆಯೋಜಕರಾದ ಶಶಿ ಬಂಗಾಡಿ, ಶ್ಯಾಮ ಬೆಳ್ತಂಗಡಿ, ರಮೇಶ್ ಕೇಳ್ತಾಜೆ ಉಪಸ್ಥಿತರಿದ್ದರು.

error: Content is protected !!