ಕುವೆಟ್ಟು ವ್ಯಾಪ್ತಿಯಲ್ಲಿ ಹೈಮಾಸ್ಕ್ ದೀಪಗಳ ಲೋಕಾರ್ಪಣೆ

ಕುವೆಟ್ಟು:
ಸಬರಬೈಲು:
ಸಬರಬೈಲು ಶಾಲೆ ಬಳಿಯ ಹೈಮಾಸ್ಕ್ ದೀಪವನ್ಷು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ ಹಿರಿಯರಾದ ಕ್ರಷ್ಣ ರೈ, ಬೂತ್ ಸಮಿತಿ ಅಧ್ಯಕ್ಷ ಮನೋಹರ ಕೇದಳಿಕೆ, ಪದ್ಮನಾಭ ಶೆಟ್ಟಿ ಅರ್ಕಜೆ, ರಾಜುದ್ದೀನ್ ಸಬರಬೈಲು, ಜಯರಾಮ್ ಬಂಗೇರ ಬಳ್ಪುಂಜ ಮತ್ತಿತರರು ಉಪಸ್ಥಿತರಿದ್ದರು.

ಎರಂಗಲ್ಲು:
ಕುವೆಟ್ಟು ಗ್ರಾಮದ ಎರಂಗಲ್ಲು ಬಳಿ ಹೈಮಾಸ್ಕ್ ದೀಪವನ್ನು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿ. ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ಹಿರಿಯರಾದ ರಾಮಣ್ಣ ಪೂಜಾರಿ ನ್ಯಾಯದಕಲ, ಬೂತ್ ಸಮಿತಿಯ ಅಧ್ಯಕ್ಷ ಕಿಶೋರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಪಿಲಿಚಾಮುಂಡಿ ದೈವಸ್ಥಾನದ ಬಳಿ:
ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವಸ್ಥಾನದ ಬಳಿ ಹೈಮಾಸ್ಟ್ ದೀಪವನ್ನು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿ. ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ದೈವಸ್ಥಾನ ಅರ್ಚಕ ಶ್ರೀನಿವಾಸ ಅಮ್ಮಣ್ಣಾಯ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ರಾಜ್ ಪ್ರಕಾಶ್ ಪಡ್ಡೈಲು, ಬೂತ್ ಸಮಿತಿ ಅಧ್ಯಕ್ಷ ಜಯರಾಮ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.

ಮದ್ದಡ್ಕ ಮಸೀದಿ ಬಳಿ:
ಮದ್ದಡ್ಕ ಮಸೀದಿ ಆವರಣದಲ್ಲಿ ನಿರ್ಮಾಣಗೊಂಡ ಹೈಮಾಸ್ಕ್ ಲೈಟ್ ದೀಪವನ್ನು ಶಾಸಕ ಶ್ರೀ ಹರೀಶ್ ಪೂಂಜ ಅವರು ಉದ್ಘಾಟಿಸಿದರು.

error: Content is protected !!