
ಬೆಳ್ತಂಗಡಿ: ತೆಕ್ಕಾರು ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಡಿ. 31 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಬಾಜರು – ತೆಕ್ಕಾರು ರಸ್ತೆಯ ಉಲಾಡಕ್ಕ ಎಂಬಲ್ಲಿ ಮಳೆಗಾಲದಲ್ಲಿ ರಸ್ತೆ ಬದಿ ಕುಸಿದಿದ್ದು ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಳ್ಳಲಲಿಲ್ಲ, ಕುಟ್ಟಿಕಳ್ಳ ಮೋರಿ ಕುಸಿದಿದೆ, ಅಡಕೆ ಕೃಷಿಗೆ ರೋಗ
ತೆಕ್ಕಾರಿನ ಹೃದಯ ಭಾಗಕ್ಕೆ ತಲುಪುವ ಬಾಜರು – ಜೋಡುಕಟ್ಟೆ ಹಾಗೂ ಸರಳೀಕಟ್ಟೆ – ಗೋವಿಂದಗುರಿ ರಸ್ತೆ ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದಾಗ ಫೆಬ್ರವರಿ-ಮಾರ್ಚ್ ತಿಂಗಳೊಳಗೆ ಈ ರಸ್ತೆ ದುರಸ್ತಿ ಕಾರ್ಯ ನಡೆಸಲಾಗುವುದು, ಕಳೆದ ಅವಧಿಯಲ್ಲಿ ಈ ಭಾಗದಲ್ಲಿ ಶಿಲಾನ್ಯಾಸ ನಡೆಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬಹುಕಾಲದ ಬೇಡಿಕೆಯಾದ ಸರಳೀಕಟ್ಟೆ- ಗೋವಿಂದಗುರಿ ರಸ್ತೆಗೆ 10 ಲಕ್ಷ ಅನುದಾನ ಒದಗಿಸುವುದಾಗಿ ಶಾಸಕರು ತಿಳಿಸಿದರು. ಈ ರಸ್ತೆ ದುರಸ್ತಿ ಕುರಿತು ಸುದ್ದಿ ಉದಯ ಪತ್ರಿಕೆ ವರದಿ ಮಾಡಿ ಬೆಳಕು ಚೆಲ್ಲಿತ್ತು.
ಗ್ರಾಮ ಪಂಚಾಯಿತಿ ಕಟ್ಟಡದ ಕಾಮಗಾರಿಗೆ ಪೂರ್ಣಕ್ಕೆ ಶಾಸಕರು ಅನುದಾನ ಒದಗಿಸಿ.
11 ಗ್ರಾಮಗಳ ನೆಮ್ಮದಿಯನ್ನು ಕೆಡಿಸುತ್ತಿದೆ ನೆಮ್ಮದಿ ಕೇಂದ್ರ. ಕಲ್ಲೇರಿಯಲ್ಲಿ ನೆಮ್ಮದಿ ಕೇಂದ್ರ ನಿರ್ಮಾಣ ಮಾಡಬೇಕು ಇದರೊಂದಿಗೆ ರೈತ ಸಂಪರ್ಕ ಕೇಂದ್ರ ಕಲ್ಲೇರಿಗೆ ಬರಬೇಕು ಎಂದು ಗ್ರಾಮಸ್ಥರು ಹೇಳಿದಾಗ ಕಣಿಯೂರು ಹೋಬಳಿ ರಚನೆ ಕಾರ್ಯ ಪ್ರಗತಿಯಲ್ಲಿದೆ ಎಂದು ಶಾಸಕರು ತಿಳಿಸಿದರು.
ನಲಿ -ಕಲಿ ಶಿಕ್ಷಣ ಪದ್ದತಿಯನ್ನು ರದ್ದುಗೊಳಿಸಬೇಕು, ಶಿಕ್ಷಕರಿಗೆ ದಿನ ನಿತ್ಯ ಸಭೆ, ಶಿಕ್ಷಕರಿಲ್ಲ, ಆಹಾರ ಸರಬರಾಜಿನಲ್ಲಿ ಗುಣಮಟ್ಟ ಇಲ್ಲ ಎಂದು ಗ್ರಾಮಸ್ಥರು ಹೇಳಿದಾಗ ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿರುವುದು ರಾಜ್ಯದ ಮೊದಲ ಶಾಸಕ ನಾನು, ಈ ಬಗ್ಗೆ ಮನವಿ ಸಲ್ಲಿಸಲಾಗಿದೆ, ಈ ಪದ್ದತಿ ಸರ್ಕಾರಿ ಶಾಲೆಗಳ ಶೈಕ್ಷಣಿಕ ವ್ಯವಸ್ಥೆಗೆ ಇದರಿಂದ ಸಹಕಾರಿಯಾಗಲಿದೆ ಎಂದು ಶಾಸಕರು ಹೇಳಿದರು. ಕುಟ್ಟಿಕಳ ಮತ್ತು ಸರಳೀಕಟ್ಟೆ ಶಾಲೆಯಲ್ಲಿ ಕೊಠಡಿ, ಶೌಚಾಲಯ, ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿದೆ ಎಂದು ಗ್ರಾಮಸ್ಥರು ಹೇಳಿದಾಗ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಸರಳಿಕಟ್ಟೆ ಶಾಲೆಯ ಪಹಣಿ ಆಗಿಲ್ಲ, ಕಾಲು ಸಂಕ, ಚರಂಡಿ ವ್ಯವಸ್ಥೆ, ಪೆದಮಲೆ – ಕುಟ್ಟಿಕಳ ರಸ್ತೆ ಅಭಿವೃದ್ಧಿಗೆ ಆಗ್ರಹ, ವಿದ್ಯುತ್ ತಂತಿ ಬದಲಾವಣೆ, ಬೆಳೆ ವಿಮೆ ಸಮಸ್ಯೆ, ನೆಟ್ವರ್ಕ್ ಸಮಸ್ಯೆ ವ್ಯಾಪಕವಾಗಿದೆ ಎಂದು ಗ್ರಾಮಸ್ಥರು ಹೇಳಿದಾಗ ಹೆಚ್ಚುವರಿ ಟವರ್ ನಿರ್ಮಾಣಕ್ಕೆ ಸಂಸದರಿಗೆ ತಿಳಿಸಲಾಗುವುದು..
ಸಾರಿಗೆ ಬಸ್ ಆದಿತ್ಯವಾರ ಬರುವುದಿಲ್ಲ ಬಸ್ ತುಂಗದಾಣ ಇಲ್ಲ, ಬೆಳ್ತಂಗಡಿ – ತೆಕ್ಕಾರು- ಬಿಸಿರೋಡ್ ಮತ್ತು ಪುತ್ತೂರು ತೆಕ್ಕಾರು ಬಸ್ ಸೌಲಭ್ಯ ಕಲ್ಪಿಸಬೇಕು. ಈಗಿರುವ ಬಸ್ ಅಜಿಲಮೋಗರು ಮಸೀದಿ ವರೆಗೆ ವಿಸ್ತರಿಸಬೇಕು, ಈ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು, ಉಪ್ಪಿನಂಗಡಿ – ಬಾಜರು ರೂಟ್ ನಲ್ಲಿ ಖಾಸಗಿ ಬಸ್ಸುಗಳು ಆದಿತ್ಯವಾರ ಬಾರದೆ ಇದ್ದಲ್ಲಿ ಅವರ ಪರವಾನಿಗೆ ರದ್ದುಗೊಳಿಸಲು ಆರ್ ಟಿ ಓ ಗೆ ಸೂಚನೆ ನೀಡಬೇಕು ಎಂದು
ಎಂದು ಶಾಸಕರು ಇಓಗೆ ನಿರ್ದೇಶನ ನೀಡಿದರು.
ತಹಶೀಲ್ದಾರ್ ಪ್ರಥ್ವಿ ಸಾನಿಕಂ, ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ಅಧ್ಯಕ್ಷೆ ರಹಿಯಾನತ್, ಉಪಾಧ್ಯಕ್ಷೆ ಪುಷ್ಪಾ ಕೆ, ಸದಸ್ಯರು ಇಲಾಖಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.