
ಬೆಳ್ತಂಗಡಿ :ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತಿದ್ದ ತಾರನಾಥ್ ಅವರನ್ನು ಲಾಯಿಲ ಗ್ರಾಮ ಪಂಚಾಯತ್ ಪ್ರಭಾರ ಪಿಡಿಒ ಆಗಿ ನಿಯುಕ್ತಿಗೊಳಿಸಲಾಗಿದೆ. ಲಾಯಿಲ ಗ್ರಾಮದಲ್ಲಿ ಪ್ರಭಾರ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತಿದ್ದ ಶ್ರೀನಿವಾಸ್ ಡಿ.ಪಿ ಅವರನ್ನು ಮಡಂತ್ಯಾರ್ ಪಂಚಾಯತ್ ಗೆ ಖಾಯಂ ಪಿಡಿಒ ಆಗಿ ವರ್ಗಾವಣೆಗೊಳಿಸಲಾಗಿತ್ತು. ಡಿ 26 ರಂದು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಲಾಯಿಲ ಗ್ರಾಮ ಮಟ್ಟದ ಜನಸ್ಪಂದನ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಗ್ರೇಡ್ ವನ್ ಗ್ರಾಮಪಂಚಾಯತ್ ಲಾಯಿಲದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತಿದ್ದ ತಾರನಾಥ್ ಅವರನ್ನು ಕೊಯ್ಯೂರು ಪಂಚಾಯತ್ ಗೆ ಪ್ರಭಾರ ಪಿಡಿಒ ಆಗಿ ವರ್ಗಾವಣೆ ಮಾಡಿದ್ದು, ಈ ಬಗ್ಗೆ ಅಸಾಮಾಧಾನ ಹೊರಹಾಕಿದ ಗ್ರಾಮಸ್ಥರು ಲಾಯಿಲಕ್ಕೆ ಖಾಯಂ ಪಿಡಿಒ ಅವರನ್ನು ನೇಮಕಗೊಳಿಸಬೇಕು. ದೊಡ್ಡ ಪಂಚಾಯತ್ ಗಳಲ್ಲಿ ಒಂದಾದ ಲಾಯಿಲದಲ್ಲಿ ಅಧಿಕಾರಿಗಳ ಕೊರತೆಯಿಂದ ಸಾರ್ವಜನಿಕರ ಕೆಲಸ ವಿಳಂಬವಾಗುವುದಲ್ಲದೆ ಸಮಸ್ಯೆಯಾಗುತ್ತಿದೆ. ತಕ್ಷಣ ಖಾಯಂ ಪಿಡಿಒ ಅವರ ನೇಮಕ ಮಾಡಬೇಕು ಎಂದು ಶಾಸಕರಲ್ಲಿ ಒತ್ತಾಯಿಸಿದರು. ಈ ವೇಳೆ ಇಒ ಅವರು ಖಾಯಂ ಕಾರ್ಯದರ್ಶಿಯಾಗಿರುವ ತಾರನಾಥ್ ಅವರನ್ನು ಪ್ರಭಾರ ಪಿಡಿಒ ಆಗಿ ನಿಯೋಜಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದ್ದರು. ಅದರಂತೆ ಜ 01 ರಂದು ಆದೇಶ ಹೊರಡಿಸಲಾಗಿದೆ.