ಹಳೆ ವಿದ್ಯಾರ್ಥಿಗಳಿಂದ ಪೆರ್ಲ-‌ಬೈಪಾಡಿ‌ ಶಾಲೆಗೆ ಲ್ಯಾಪ್‌ಟಾಪ್, ಪ್ರಿಂಟರ್ ಕೊಡುಗೆ

 

ಬಂದಾರು: ಪ್ರೌಢ ಶಾಲಾ ವಿಭಾಗದಲ್ಲಿ ‌ಶೇ.100 ಫಲಿತಾಂಶ ದಾಖಲಿಸಿದ ಪೆರ್ಲ- ಬೈಪಾಡಿ ಪ್ರೌಢ ಶಾಲೆ ಹಳೆ ವಿದ್ಯಾರ್ಥಿಗಳು ಲ್ಯಾಪ್‌ಟಾಪ್ ಹಾಗೂ ಪ್ರಿಂಟರ್ ಕೊಡುಗೆಯಾಗಿ ನೀಡಿದರು.
2005-06ನೇ ಸಾಲಿನ ಎಸ್. ಎಸ್.ಎಲ್.ಸಿ. ವಿದ್ಯಾರ್ಥಿಗಳು ಜೊತೆ ಸೇರಿ ‌ಕೊಡುಗೆ ನೀಡಲು ತೀರ್ಮಾನಿಸಿದ್ದು, ಶಾಸಕ ಹರೀಶ್ ಪೂಂಜಾ ಅವರ ಮೂಲಕ ಪ್ರಭಾರ ಮುಖ್ಯ ಶಿಕ್ಷಕಕ ಕೊರಗಪ್ಪ ಟಿ. ಅವರಿಗೆ ಹಸ್ತಾಂತರಿಸಿದರು.
ಜಿ.ಪಂ. ಸದಸ್ಯೆ ಮಮತಾ ಶೆಟ್ಟಿ, ತಾ.ಪಂ ಸದಸ್ಯ ಕೃಷ್ಣಯ್ಯ ಆಚಾರ್ಯ, ಊರಿನ ಹಿರಿಯರು, ವಿದ್ಯಾರ್ಥಿಗಳ ಪೋಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!