ಉದ್ಯೋಗ ಖಾತ್ರಿ ಯೋಜನೆ: ಬೆಳ್ತಂಗಡಿಯ ಮೂವರು ಅಧಿಕಾರಿಗಳಿಗೆ ಪ್ರಶಸ್ತಿ

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್

ಬೆಳ್ತಂಗಡಿ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೊಜನೆಯಡಿ 2019-20ನೇ ಸಾಲಿನಲ್ಲಿ ಅತ್ಯುತ್ತಮ ಅನುಷ್ಠಾನ ಮಾಡಿರುವವರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ತಾಲೂಕಿನ ಮೂವರು ಅಧಿಕಾರಿಗಳಿಗೆ ಪ್ರಶಸ್ತಿ ಲಭಿಸಿದೆ. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್, ಅಂಡಿಂಜೆ ಪಿ.ಡಿ.ಓ. ಪುರುಷೋತ್ತಮ್, ಬೆಳ್ತಂಗಡಿ ತಾ.ಪಂ. ತಾಂತ್ರಿಕ ಸಂಯೋಜಕ ರುತೇಶ್ ಎಂ.ಜೆ. ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪಿ.ಡಿ.ಓ. ಪುರುಷೋತ್ತಮ್

ನ.12ರಂದು ಮೂಡಬಿದಿರೆಯ ಪುತ್ತಿಗೆ ಗ್ರಾ.ಪಂ. ಆವರಣದಲ್ಲಿ ಘನತ್ಯಾಜ್ಯ ಘಟಕ ಉದ್ಘಾಟನೆ ಹಾಗೂ ಸ್ವಚ್ಛಸಂಕೀರ್ಣ ಏಕರೂಪದ ಬ್ರಾಂಡಿಂಗ್ ಲೋಕಾರ್ಪಣೆ ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮ ಸಮಾರೋಪ ಸಂದರ್ಭದಲ್ಲಿ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ತಾ.ಪಂ. ತಾಂತ್ರಿಕ ಸಂಯೋಜಕ ರುತೇಶ್ ಎಂ.ಜೆ.

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೊಜನೆ ಜಿಲ್ಲಾಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಅತ್ಯುತ್ತಮ ಅನುಷ್ಠಾನ ಮಾಡಿದ ಅಧಿಕಾರಿಗಳು, ಸಿಬ್ಬಂದಿಗಳನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ಮಾಡಲಾಗುತ್ತದೆ.

error: Content is protected !!