ಕಾರಿಂಜ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಧರ್ಣಪ್ಪ ನಾಯ್ಕರಿಗೆ ಸನ್ಮಾನ: ಬೀಳ್ಕೊಡುಗೆ

ಕುಪ್ಪೆಟ್ಟಿ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾರಿಂಜದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯೋಪಾಧ್ಯಾಯ ಧರ್ಣಪ್ಪ ನಾಯ್ಕ ಅವರನ್ನು ಕುಪ್ಪೆಟ್ಟಿ ವಲಯದ ಶಿಕ್ಷಕರ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು‌.
ಸನ್ಮಾನ ನೆರವೇರಿಸಿ ಮಾತನಾಡಿದ ಬೇಂಗಿಲ ಶಾಲಾ ಮುಖ್ಯೋಪಾಧ್ಯಾಯ ತಿಪ್ಪಣ್ಣ, ‘ಧರ್ಣಪ್ಪ ನಾಯ್ಕರ ಸರಳತೆ, ಕರ್ತವ್ಯನಿಷ್ಠೆ ಶಿಕ್ಷಕರಿಗೆ ಮಾದರಿ. ಸಮಾಜಕ್ಕೆ ಮಾಡುವ ಉತ್ತಮ ಕೆಲಸಗಳು ಸದಾಕಾಲ ಆ ವ್ಯಕ್ತಿಯ ನೆನಪನ್ನು ಶಾಶ್ವತವಾಗಿ ಇರಿಸುತ್ತದೆ ಎಂದರು.
ಸನ್ಮಾನ ಸ್ವೀಕರಿಸಿದ ಧರ್ಣಪ್ಪ ನಾಯ್ಕ ಅವರು ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕರಾಯ ಸಿ.ಆರ್.ಪಿ. ಮಹಮ್ಮದ್ ಶರೀಫ್ ಕೆ.ಪಿ., ತಾಲೂಕು ಶಿಕ್ಷಕರ ಸಂಘದ ಜಿಲ್ಲಾ ಪ್ರತಿನಿಧಿ ಬಿ.ಎಸ್. ಬಿರಾದಾರ್, ತಾಲೂಕು ಸರ್ಕಾರಿ ಎನ್.ಪಿ.ಎಸ್.ನೌಕರರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಮಾಚಾರ್, ಮೈರೋಳ್ತಡ್ಕ ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ ನಿವೃತ್ತರ ಸೇವೆಯನ್ನು ಸ್ಮರಿಸಿದರು. ಕುಪ್ಪೆಟ್ಟಿ ಶಾಲಾ ಮುಖ್ಯೋಪಾಧ್ಯಾಯರಾದ ಮಹಾಂತೇಶ್ ಅಧ್ಯಕ್ಷತೆ ವಹಿಸಿದ್ದರು. ಕ್ಲಸ್ಟರ್ ಸಿ.ಆರ್.ಪಿ. ಸಂಧ್ಯಾ ಬಿ. ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

error: Content is protected !!