ವೇಣೂರು ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂ. ಸಹಾಯಧನ ಹಸ್ತಾಂತರ

ವೇಣೂರು: ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5ಲಕ್ಷ ರೂ ಮೌಲ್ಯದ ಸಹಾಯಧನದ ಡಿ.ಡಿ ಯನ್ನು ಸಮುದಾಯ ಅಭಿವೃದ್ದಿ ವಿಬಾಗದ ಪ್ರಾದೇಶಿಕ‌ ನಿರ್ದೇಶಕರಾದ ಶ್ರೀ ಹರಿ ಅವರು ದೇವಸ್ಥಾನ ಜೀರ್ಣೋದ್ಧಾರ ಸಮಿತಿಗೆ ನೀಡಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಜಯರಾಮ ಶೆಟ್ಟಿ, ಧರಣೇಂದ್ರಕುಮಾರ್, ಸತೀಶ್ ಶೆಟ್ಟಿ, ನಿರ್ದೇಶಕ ಯಶವಂತ್ ಎಸ್., ಪ್ರಭಾಕರ ಅಟ್ಟಾಜೆ, ಪುರುಷೊತ್ತಮ ರಾವ್, ಸೋಮಯ್ಯ, ಸತೀಶ್ ಹೆಗ್ಡೆ, ಹರೀಶ್ ಕುಲಾಲ್, ಜಯಶಂಕರ ಹೆಗ್ಡೆ, ನಾರಾಯಣ ಕುಲಾಲ್ , ಸೇವಾ ಪ್ರತಿನಿಧಿಗಳು ಮತ್ತಿತರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕರಾದ ಯೋಗಿಶ್ ನಿರೂಪಿಸಿದರು.

error: Content is protected !!