ಕಣಿಯೂರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ

ಕಣಿಯೂರು: ಸಂಘಟನೆಗಳು ಸಾಮರಸ್ಯಕ್ಕೆ ಇರುವಂತದ್ದು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಮತ್ತು ಸಂಘಗಳು ಸಮಾಜದ ಉದ್ಧಾರಕ್ಕಾಗಿ ಶ್ರಮಿಸಬೇಕು. ಕಣಿಯೂರು ಸಂಘದ ಬೆಳವಣಿಗೆ ಅದ್ಭುತ. ಸಂಘದ ಕಾರ್ಯಕ್ರಮದಿಂದ ಸಮುದಾಯದವರ ಒಡನಾಟ ಹೆಚ್ಚಾಗುತ್ತದೆ ಎಂದು ತಾಲೂಕು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘ ಗುರುವಾಯನಕೆರೆಯ ಇದರ ಜೊತೆ ಕಾರ್ಯದರ್ಶಿ ಉಮೇಶ್ ಕುಲಾಲ್ ತಿಳಿಸಿದರು.

ಅವರು ಕಣಿಯೂರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದಿಂದ ಸಂತೋಷ್ ಮೂಲ್ಯ ಅಂಡೇಲ್ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ಪಿ.ಯು.ನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಿ ಮಾತನಾಡಿದರು.

ತಾಲೂಕು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ನಿರ್ದೇಶಕ ಪುಷ್ಪರಾಜ್ ಲಾಯಿಲ ಮಾತನಾಡಿ, ಕಣಿಯೂರು ಸಂಘದಿಂದ ಸಮಾಜ ಬಾಂಧವರ ಅಭಿವೃದ್ಧಿಯಾಗುತ್ತಿದೆ. ತಾಲೂಕು ಸಂಘಕ್ಕೆ ಹೆಮ್ಮೆಪಡುವಂತೆ ಸಾಮಾಜಿಕ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಪ್ರಗತಿಪರ ಕೃಷಿಕ ವೀರಪ್ಪ ಸಾಲಿಯಾನ್ ಮಾತನಾಡಿ, ಸ್ವಸಹಾಯ ಸಂಘಗಳ ರಚನೆ ಮಾಡಬೇಕು ಮತ್ತು ಅದು ನಮ್ಮ ಸದಸ್ಯರಿಗೆ ಅನುಕೂಲ ಆಗುವ ರೀತಿಯಲ್ಲಿ ಅದನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಣಿಯೂರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಅಧ್ಯಕ್ಷ ಉಮೇಶ್ ಪಿಲಿಗೂಡು, ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹ ನೀಡುವುದು ಮತ್ತು ಸ್ವಜಾತಿ ಬಾಂಧವರ ಸಮಸ್ಯೆಗೆ ಪರಿಹಾರ ನೀಡುವುದು ನಮ್ಮ ಉದ್ದೇಶ ಎಂದರು.

ಸಂಘದ ಸಂಘಟನಾ ಕಾರ್ಯದರ್ಶಿ ಸುಧೀರ್ ಕೆ.ಎನ್. ಸ್ವಾಗತಿಸಿ, ಗೋಪಾಲ್ ಕುಲಾಲ್ ನಿರೂಪಿಸಿದರು. ಕಾರ್ಯದರ್ಶಿ ಬಾಲಕೃಷ್ಣ ಹೆಚ್. ವಂದಿಸಿದರು.

error: Content is protected !!