ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸಂದ ಗೌರವ: ಕೊರಗಪ್ಪ ನಾಯ್ಕ್

ಬೆಳ್ತಂಗಡಿ: ಬೆಳ್ತಂಗಡಿ ಲ್ಯಾಂಪ್ಸ್ ಸಹಕಾರ ಸಂಘದ ಇತಿಹಾಸದಲ್ಲಿ ಮೊದಲ‌ ಬಾರಿಗೆ ಅರ್ಥಪೂರ್ಣವಾಗಿ ಜಾನಪದ ಕ್ಷೆತ್ರದ ಪಾಡ್ದನ, ಸಂದಿ ಇದರ ಬಗ್ಗೆ ಸಾಧನೆಗೈದ ಶಾರದಾ ಅಪ್ಪು ನಾಯ್ಕ್ ಮಾರಿಪದೆ ಇವರನ್ನು ಸನ್ಮಾನಿಸಿ ವಾಲ್ಮೀಕಿ ಜಯಂತಿ ಯನ್ನು ಆಚರಿಸಿದ್ದು ಅರ್ಥಪೂರ್ಣ ಕಾರ್ಯಕ್ರಮ ಹಾಗೂ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸಂದ ಗೌರವ ಎಂದು ಜಿಲ್ಲಾ ಪಂಚಾಯತ್ ಸದಸ್ಯ, ಜಿ.ಪಂ. ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ್ ತಿಳಿಸಿದರು.
ಅವರು ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾದ ವಿವಿದೋದ್ದೇಶ ಸಹಕಾರ ಸಂಘ (ನಿ )ಲ್ಯಾಂಪ್ಸ್ ಬೆಳ್ತಂಗಡಿ ದ.ಕ. ಇದರ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಆಚರಿಸಿದ ವಾಲ್ಮೀಕಿ ಜಯಂತಿಯ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷರು ಲಿಂಗಪ್ಪ ನಾಯ್ಕ್ ಉರುವಾಲು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಾನಪದ ಕ್ಷೆತ್ರದಿಂದ ಶಾರದಾ ಅಪ್ಪು ನಾಯ್ಕ್ ಮಾರಿಪಾದೆ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿಯೇ ಪಾಡ್ದನ ಹಾಡಿದರು.
ತಾಲೂಕು ಸಹಕಾರ ಭಾರತೀ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆರ್ಮುಡ ಮತ್ತು ನಗರ ಪಂಚಾಯತ್ ಸದಸ್ಯರಾದ ರಜನಿ ಕುಡ್ವ, ನಿರ್ದೇಶಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯದರ್ಶಿ ನೀನಾಕುಮಾರ್ ಸ್ವಾಗತಿಸಿದರು.ನಿರ್ದೇಶಕ ಸೀತಾರಾಮ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಸಂತೋಷ್ ನಾಯ್ಕ್ ಅತ್ತಾಜೆ ವಂದಿಸಿದರು. ಶ್ವೇತಾ ಕೆ. ನಿರೂಪಿಸಿದರು.

error: Content is protected !!