ಗುರುವಾಯನಕೆರೆ: ದಿವ್ಯಶ್ರೀ ಕಾಂಪ್ಲೆಕ್ಸ್ ಉದ್ಘಾಟನೆ

ಬೆಳ್ತಂಗಡಿ: ಗುರುವಾಯನಕೆರೆ- ಉಡುಪಿ ಹೆದ್ದಾರಿಯ ಮಾಕೆರೆಕೆರೆ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ದಿವ್ಯಶ್ರೀ ಕಾಂಪ್ಲೆಕ್ಸ್ ಉದ್ಘಾಟನೆ ಹಾಗೂ ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಇದರ ಶುಭಾರಂಭ ಕಾರ್ಯಕ್ರಮ ನಡೆಯಿತು.


ಕಾಂಪ್ಲೆಕ್ಸ್ ಉದ್ಘಾಟನೆಯನ್ನು ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಹಾಗೂ ನ.ಪಂ. ಸದಸ್ಯ ಜಯಾನಂದ ಗೌಡ ಬೆಳ್ತಂಗಡಿ ನೆರವೇರಿಸಿದರು. ಈ ಸಂದರ್ಭದಲ್ಲಿ ರಾಜೇಶ್ ಶೆಟ್ಟಿ ಅವರು ಮಾತನಾಡಿ, ಈ ಕಾಂಪ್ಲೆಕ್ಸ್ನಲ್ಲಿ ಪ್ರಾರಂಭವಾದ ಉದ್ಯಮವು ಯಶಸ್ವಿಯಾಗಿ ಅಭಿವೃದ್ಧಿ ಹೊಂದಿ ಮುಂದಿನ ದಿನಗಳಲ್ಲಿ ಹಲವು ಯುವಕರಿಗೆ ಉದ್ಯೊಗ ನೀಡುವಂತಹ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ನ.ಪಂ ಸದಸ್ಯ ಜಯಾನಂದ ಗೌಡ ಮಾತನಾಡಿ, ಈ ಕಾಂಪ್ಲೆಕ್ಸ್ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಕಾಂಪ್ಲೆಕ್ಸ್ ಆಗಿ ಬೆಳೆಯಲಿ ಅದರ ಮೂಲಕ ಹಲವು ಉದ್ಯಮಿಗಳಿಗೆ ವ್ಯವಹಾರ ತಾಣವಾಗಲಿ ಎಂದು ಹಾರೈಸಿದರು.


ದಯಾಕರ್ ಭಟ್ ಕುತ್ಯಾರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಕೃಷ್ಣಪ್ಪ ಮೂಲ್ಯ ಹಾಗೂ ಜಗದೀಶ್ ಎಂ. ಕುಲಾಲ್ ಉಪಸ್ಥಿತರಿದ್ದರು. ಛಾಯಾಗ್ರಾಹಕ ಉಮೇಶ್ ಕುಲಾಲ್ ಸ್ವಾಗತಿಸಿ, ನಿರೂಪಿಸಿದರು.

error: Content is protected !!