ಈದ್ ಮಿಲಾದ್ ಮಹತ್ವ, ಐತಿಹಾಸಿಕ ಹಿನ್ನೆಲೆ

ಖಿಲರ್ ಜುಮಾ ಮಸ್ಜಿದ್, ಬೆಳ್ತಂಗಡಿ

ಪ್ರವಾದಿ ಮುಹಮ್ಮದ್ (ಸ) ಜನನ ಕ್ರಿಸ್ತಶಕ 575, ಇಸ್ಲಾಮಿಕ್ ಹಿಜರಿ ಕ್ಯಾಲೆಂಡರಿನ ರಬೀವುಲ್ ಅವ್ವಲ್ ತಿಂಗಳ ಹನ್ನೆರಡನೇ ತಾರೀಕಿನಂದು ಸೌದಿ ಅರೇಬಿಯಾದ ಮಕ್ಕಾ ನಗರದಲ್ಲಿ ಜನಿಸಿದರು. ಪ್ರವಾದಿ ಮುಹಮ್ಮದ್ (ಸ)ರ ತಂದೆ. ಅಬ್ದುಲ್ಲ (ರ) ಮತ್ತು ತಾಯಿ ಆಮಿನ ಬೀವಿ (ರ). ಪ್ರವಾದಿ ಮುಹಮ್ಮದ್ (ಸ)ರ ತಾಯಿ ಪ್ರವಾದಿಯವರ ಗರ್ಭವತಿಯಾಗಿದ್ದಾಗಲೇ ತಂದೆ ಅಬ್ಬುಲ್ಲ (ರ) ಮರಣ ಹೊಂದಿದರು. ಮಕ್ಕಾದ ಹಾಶಿಂ ವಂಶ ಮತ್ತು ಕುರೈಸಿ ಗೋತ್ರದಲ್ಲಿ ಪ್ರವಾದಿ ಮುಹಮ್ಮದರ ಜನನವಾಯಿತು.

ಪ್ರವಾದಿ ಮುಹಮ್ಮದ್ (ಸ) ಇಸ್ಲಾಮಿನ ಪ್ರವಾದಿಗಳಲ್ಲಿ ಕೊನೆಯವರಾಗಿದ್ದಾರೆ. ಕುರಾನ್ ಪ್ರವಾದಿ ಮುಹಮ್ಮದ್ (ಸ)ರಿಗೆ ಅವತೀರ್ನಗೊಳಿಸಿದ ಇಸ್ಲಾಮಿನ ಪ್ರಮುಖ ಗ್ರಂಥ. ಈ ಕುರಾನ್ ಬರೆಯಲು ಒಂದು ದಿನದಲ್ಲಿ ಅವತೀರ್ಣಗೊಂಡಿಲ್ಲ, ಬದಲಿಗೆ ಪೂರ್ಣ ಇಪ್ಪತ್ತಮೂರು ವರ್ಷಗಳು ಬೇಕಾಯಿತು. ಈದ್ ಮಿಲಾದ್ ಇಸ್ಲಾಂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದು. ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ (ಸ)ರ ಜನ್ಮ ದಿನಾಚರಣೆಯನ್ನು ಪ್ರತೀವರ್ಷ ಈದ್ ಮಿಲಾದ್ ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಮುಸಲ್ಮಾನರು ಆಚರಿಸುತ್ತಾರೆ.

ಕಾಜೂರ್ ಜುಮಾ ಮಸ್ಜಿದ್

ಈದ್ ಮಿಲಾದ್ ಸಂದರ್ಭದಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ನಡೆಯುತ್ತವೆ. ಧರ್ಮಗುರುಗಳು ಪ್ರವಾದಿ ಮಹಮ್ಮದ್ ಪೈಗಂಬರ್ (ಸ) ಅವರು ಸಮಾಜಕ್ಕೆ ನೀಡಿದ ಕೊಡುಗೆ, ಶಾಂತಿ ಸಂದೇಶ, ಯುವ ಪೀಳಿಗೆಗೆ ನೀಡಿದ ಮಾರ್ಗದರ್ಶನಗಳನ್ನೆಲ್ಲಾ ತಿಳಿಸಿಕೊಡುತ್ತಾರೆ. ಜೊತೆಗೆ, ಪ್ರವಾದಿಗಳ ವ್ಯಕ್ತಿತ್ವವನ್ನು ತಿಳಿಸಿಕೊಡುವ ಸಂದೇಶಗಳನ್ನೂ ಈ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಜೊತೆಗೆ, ಇಸ್ಲಾಂನ ಪವಿತ್ರ ಗ್ರಂಥ ಕುರಾನ್‌ನ ಪಠಣ ಮಾಡಲಾಗುತದೆ.

ಗೌಸಿಯಾ ಜಾಮಿಯಾ ಮಸ್ಜಿದ್, ಬೆಳ್ತಂಗಡಿ

ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ, ನಿಮ್ಮ ಮನೆ, ಮನಗಳಲ್ಲಿ ಸದಾ ಶಾಂತಿ, ನೆಮ್ಮದಿ ತುಂಬಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಪ್ರಜಾ‌ಪ್ರಕಾಶ ತಂಡದಿಂದ ಈದ್ ಮಿಲಾದ್ ಶುಭಾಶಯಗಳು.

error: Content is protected !!