ಅನ್ಯ ಕೋಮಿನ ವ್ಯಕ್ತಿಗಳಿಂದ ಹಲ್ಲೆ, ಕೊಲೆ ಬೆದರಿಕೆ ಆರೋಪ

ಕಕ್ಕಿಂಜೆ: ಅನ್ಯ ಕೋಮಿನ ವ್ಯಕ್ತಿಗಳು ಯುವಕನೊಬ್ಬನ ಅಂಗಡಿ ಬಳಿ ತೆರಳಿ, ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ ಪ್ರಕರಣ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದೆ.
ಕಕ್ಕಿಂಜೆ ಪೇಟೆಯಲ್ಲಿರುವ ಸುಧೀರ್ ಆರ್. ಎಂಬವರ ಅಂಗಡಿ ಬಳಿ ಅ.29ರಂದು ಸಂಜೆ 5 ಗಂಟೆ ಸುಮಾರಿಗೆ ಅನ್ಯ ಕೋಮಿನ ಸಿರಾಜ್ ಚಿಬಿದ್ರೆ, ಸಿದ್ದಿಕ್ ಗಾಂಧಿ ನಗರ, ಭಾತೀಷ್ ಕಲ್ಲಗುಂಡ, ನಜೀರ್ ಪಿ.ಕೆ., ನಜೀರ್ ಹೆಚ್.ಪಿ., ಆರೀಫ್ ಗಾಂಧಿನಗರ, ಅಸ್ಮಾಲ್ ಕತ್ತರಿಗುಡ್ಡೆ ಮೊದಲಾದವರು ಮಾರಕಾಸ್ತ್ರಗಳನ್ನು ಹಿಡಿದು ಬಂದು ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಸ್ಥಳೀಯರು ಆಗಮಿಸಿದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

error: Content is protected !!