
ಬೆಳ್ತಂಗಡಿ:ಸರಕು ಸಾಗಾಟದ ಕಂಟೈನರ್ ಲಾರಿಯೊಂದು ಮಿನಿ ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಮುಂಡಾಜೆ ಗ್ರಾಮದ ಶೀಟ್ ಎಂಬಲ್ಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಮುಡಿಪುವಿನಿಂದ ಕುಟುಂಬವೊಂದು ಜಾವಗಲ್ ಗೆ ತೆರಳುತಿದ್ದ ಮಿನಿ ಬಸ್ಸಿಗೆ ಶೀಟ್ ಎಂಬಲ್ಲಿ ಚಿಕ್ಕಮಗಳೂರು ಕಡೆಯಿಂದ ಉಜಿರೆ ಕಡೆ ಹೋಗುತಿದ್ದ ಸರಕು ಸಾಗಾಟದ ಕಂಟೈನರ್ ಲಾರಿ ಕಡೂರಿನಿಂದ ಧರ್ಮಸ್ಥಳಕ್ಕೆ ಬರುತಿದ್ದ ಕೆ ಎಸ್ ಆರ್ ಟಿ. ಸಿ. ಬಸ್ಸನ್ನು ಓವರ್ ಟೇಕ್ ಮಾಡುವ ವೇಳೆ ಮಿನಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿ ಚಾಲಕ ಸ್ಥಳದಲ್ಲಿ ನಿಲ್ಲಿಸದೇ ಲಾರಿ ಸಹಿತ ತಪ್ಪಿಸಿಕೊಂಡು ಬಂದಿದ್ದು ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಬಳಿ ಸಾರ್ವಜನಿಕರು ಲಾರಿಯನ್ನು ಅಡ್ಡ ಹಾಕಿದ್ದಾರೆ. ಮಿನಿ ಬಸ್ಸಿನ ಚಾಲಕ ಸೇರಿದಂತೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಲಾರಿ ಓವರ್ ಟೇಕ್ ಮಾಡುವ ವೇಳೆ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಬಸ್ಸನ್ನು ತೀರ ರಸ್ತೆ ಬದಿಗೆ ಕೊಂಡೋಗಿದ್ದು ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಇಲ್ಲದಿದ್ದರೆ ಲಾರಿಯು ಮಿನಿ ಬಸ್ಸಿಗೆ ನೇರವಾಗಿ ಮುಖಾಮುಖಿ ಡಿಕ್ಕಿ ಹೊಡೆಯುತಿದ್ದು ಬಸ್ ಚಾಲಕನ ಸಮಯ ಪ್ರಜ್ಞೆ ಯಿಂದ ದೊಡ್ಡ ಅನಾಹುತ ತಪ್ಪಿದೆ.ಘಟನೆಯಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.