ಉಜಿರೆ ,ಬೆನಕ ಹೆಲ್ತ್ ಸೆಂಟರ್ IUI & IVF ( ಬಂಜೆತನ ನಿವಾರಣೆ ) ವಿಭಾಗಕ್ಕೆ ಕರ್ನಾಟಕ ಸರಕಾರದ ಮಾನ್ಯತೆ :

 

 

 

ಬೆಳ್ತಂಗಡಿ: NABH ಪುರಸ್ಕೃತ ಉಜಿರೆ ಬೆನಕ ಹೆಲ್ತ್ ಸೆಂಟರ್ ಗೆ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಲ್ಲಿ ART and SURROGACY & PCPNDT ( ಕೃತಕ ಸಂತಾನೋತ್ಪತಿ ತಂತ್ರಜ್ಞಾನ ಮತ್ತು ಬಾಡಿಗೆ ತಾಯ್ತನ ) ವಿಭಾಗದ ಉಪ ನಿರ್ದೇಶಕರಾದ ಡಾ.ವಿವೇಕ್ ದೊರೈ ಅವರು ಭೇಟಿ ನೀಡಿ ಬೆನಕ ಆಸ್ಪತ್ರೆಯಲ್ಲಿ ನೂತನವಾಗಿ ಪ್ರಾರಂಭಗೊಂಡ IUI clinic (Level – I ART Clinic ) Intrauterine Insemination ವಿಭಾಗವನ್ನು ಪರಿಶೀಲಿಸಿ ವಿಭಾಗದ ವೈದ್ಯರಾದ ಡಾ.ನವ್ಯ ಭಟ್ ( MBBS, MS, OBG FRM ) ಅವರಿಂದ ಕ್ಲಿನಿಕ್ ಕುರಿತು ಚರ್ಚಿಸಿದರು ಮತ್ತು ಸದರಿ ಕ್ಲಿನಿಕ್ ನ್ನು ತೆರೆಯಲು ಕರ್ನಾಟಕ ಸರ್ಕಾರದ ಪರವಾಗಿ ಅನುಮತಿ ನೀಡಿದರು. ಡಾ.ವಿವೇಕ್ ದೊರೈರವರನ್ನು ಡಾ.ಗೋಪಾಲಕೃಷ್ಣ ಮತ್ತು ಡಾ.ಭಾರತಿ ದಂಪತಿಗಳು ಬರಮಾಡಿಕೊಂಡು ಆಸ್ಪತ್ರೆಯ ಎಲ್ಲ ವಿಭಾಗಳನ್ನು ಪರಿಚಯಿಸಿದರು. ಡಾ.ವಿವೇಕ್ ದೊರೈರವರು ಉಜಿರೆಯಂಥ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಸೌಲಭ್ಯ ನೀಡುತ್ತಿರುವ ಬೆನಕ ಆಸ್ಪತ್ರೆಯ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿ IUI ಸೆಂಟರ್ / level – 2 ಕ್ಲಿನಿಕ್ ಆದಷ್ಟು ಬೇಗ ಬರಲಿ ಮತ್ತು ಪರಿಸರದ ಸಾರ್ವಜನಿಕರಿಗೆ ಪ್ರಯೋಜನವಾಗಲಿ ಎಂದು ಶುಭ ಹಾರೈಸಿದರು .
ಈ ಸಂದರ್ಭದಲ್ಲಿ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಹಾಗೂ ಪೆಲ್ವಿಕ್ ಸರ್ಜನ್ ಡಾ.ಅಂಕಿತಾ ಜಿ ಭಟ್ (MBBS, MS, OBG , Laproscopic & Pelvic Surgery ) ಉಪಸ್ಥಿತರಿದ್ದರು .

error: Content is protected !!