ಮಾಲಾಡಿ: ಹಾಲಿನ ಟೆಂಪೊ ಪಲ್ಟಿ!

ಮಾಲಾಡಿ: ಕೊಲ್ಪದಬೈಲು ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪದ ಅರ್ತಿಲ ಎಂಬಲ್ಲಿ ಫೆ.23ರ ರಾತ್ರಿ ನಂದಿನಿ ಹಾಲಿನ ಟೆಂಪೊ ಪಲ್ಟಿಯಾಗಿದೆ.

ಮಂಗಳೂರಿನಿಂದ ಧರ್ಮಸ್ಥಳ ಕಡೆ ಸಾಗುತ್ತಿದ್ದ ಹಾಲಿನ ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

ಪುಂಜಾಲಕಟ್ಟೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

error: Content is protected !!