ಎಕ್ಸೆಲ್ ಪದವಿಪೂರ್ವ ಕಾಲೇಜು ನಾಲ್ಕನೇ ಸಂವತ್ಸರವನ್ನು ದಾಟುವ ಹೊತ್ತಿಗೆ ರಾಷ್ಟ್ರವ್ಯಾಪಿ ಅಮೋಘ ಸಾಧನೆಯನ್ನು ಮಾಡುತ್ತಿದೆ. ರಾಷ್ಟ್ರದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳ ಫಲಿತಾಂಶದ ಮೂಲಕ ಗುರುತಿಸಿ, ಸಮಾಜದಲ್ಲಿ ಸಂಚಲನ ಮೂಡಿಸುತ್ತಿದೆ. ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಎಕ್ಸೆಲ್ ವಿದ್ಯಾಸಂಸ್ಥೆಯನ್ನು ಅರಸಿಕೊಂಡು ಬರುವಂತಾಗಿದೆ.
ತನ್ನ ಶೈಕ್ಷಣಿಕ ಸಾಧನೆಗಳ ಮೂಲಕ ರಾಜ್ಯದ ಶೈಕ್ಷಣಿಕ ಭೂಪಟದಲ್ಲಿ ಅನನ್ಯ ಸ್ಥಾನವನ್ನು ಗಳಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಗುರುವಾಯನಕೆರೆಯ ವಿಶಾಲ ದಂಡೆಯ ಮೇಲೆ, ನಿಸರ್ಗ ರಮಣೀಯ ತಾಣದಲ್ಲಿರುವ ಎಕ್ಸೆಲ್ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸಿದವರು ನೀಟ್, ಜೆ ಇ ಇ ಟ್ರೈನರ್ ಹಾಗೂ ರಸಾಯನ ವಿಜ್ಞಾನ ಪ್ರಾಧ್ಯಾಪಕರಾದ, ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕ ಸುಮಂತ್ ಕುಮಾರ್ ಜೈನ್.
ಕಾಲೇಜ್ ನಲ್ಲಿ ಅತ್ಯತ್ತಮ ಹಾಸ್ಟೆಲ್ ವ್ಯವಸ್ಥೆ ಹಾಗೂ ಅಲ್ಲಿಯ ನಿಯಮಗಳು ಶೈಕ್ಷಣಿಕ ಸಾಧನೆಗೆ ಸಾಧನೆಗೆ ಪೂರಕವಾಗಿದೆ. ಗುಣಮಟ್ಟದ ಆಹಾರ ವ್ಯವಸ್ಥೆ, ವಸತಿ ನಿಲಯ ಪಾಲಕರು, ಭದ್ರತಾ ವ್ಯವಸ್ಥೆ ಎಲ್ಲವನ್ನೂ ವ್ಯವಸ್ಥಿತವಾಗಿರಿಸಲಾಗಿದೆ. ವಿಶೇಷವಾಗಿ ಪ್ರತಿದಿನ ಬೆಳಗ್ಗೆ ನೀಟ್, ಜೆ.ಇ.ಇ. ತರಗತಿಗಳು ನಡೆಯುತ್ತಿವೆ. ಇದರಿಂದಲಾಗಿ ಮಕ್ಕಳ ಶ್ರವಣ ಕ್ರಮ ಚೆನ್ನಾಗಿ ನಡೆಯುತ್ತಿದೆ. ವೈದ್ಯಕೀಯ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಅವಕಾಶವನ್ನು ಹೊಂದುವ ಸಮೃದ್ಧ ಶಿಕ್ಷಣ ತಾಣವಾಗಿದ್ದು ಮಾತ್ರವಲ್ಲದೇ ವಾಣಿಜ್ಯ ವಿಭಾಗದಲ್ಲೂ ಕಾರ್ಯಸಾಧನೆಯನ್ನು ಮಾಡುವತ್ತ ಕನಸು ಹೊತ್ತಿದೆ ಎಕ್ಸೆಲ್ ಪದವಿ ಪೂರ್ವ ಕಾಲೇಜ್.
ಲಾಂಗ್ ಟರ್ಮ್ ನೀಟ್ : ಡಾಕ್ಟರ್ ಆಗಬೇಕೆಂದು ಗುರಿ ಇಟ್ಟುಕೊಂಡ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗಾಗಿ ನೀಟ್ ಪರೀಕ್ಷೆ ಯನ್ನು ಬರೆದು, ನಿರೀಕ್ಷಿತ ಅಂಕಗಳು ಬಾರದಿರುವಾಗ ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗಾಗಿಯೆ ಸಂಪೂರ್ಣ ತಯಾರಾಗಿ , ಒಂದು ವರ್ಷಗಳ ಪರ್ಯಂತ ತರಬೇತಿ ಪಡೆಯುವುದನ್ನು ನೀಟ್ ಲಾಂಗ್ ಟರ್ಮ್ ತರಬೇತಿ ಎನ್ನಲಾಗುತ್ತದೆ. ನೂರಾರು ವಿದ್ಯಾರ್ಥಿಗಳ ಹಾಗೂ ಹೆತ್ತವರ ಬೇಡಿಕೆಯ ಮೇರೆಗೆ ಎಕ್ಸೆಲ್ ಕಾಲೇಜ್‌ನಲ್ಲಿ ಲಾಂಗ್ ಟರ್ಮ್ ನೀಟ್ ಕೋಚಿಂಗ್ ಸೆಂಟರ್ ನ್ನು ಪ್ರಾರಂಭಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ರಾಂಕ್ ಪಡೆಯಲು ಎಷ್ಟೋ ಸಲ ಪ್ರತಿಭಾವಂತರಿಗೆ ಕೂಡಾ ಸಾಧ್ಯವಾಗುವುದಿಲ್ಲ. ಸರಿಯಾದ ಕೋಚಿಂಗ್ ದೊರಕದಿರುವುದು, ಯೋಗ್ಯ ಸ್ಟಡಿ ಮೆಟೀರಿಯಲ್ ಸಿಗದಿರುವುದು, ಸೂಕ್ತ ಮಾರ್ಗದರ್ಶನದ ಕೊರತೆ, ವಿಷಯಗಳನ್ನು ನೆನಪಿಟ್ಟುಕೊಳ್ಳುವ ತಂತ್ರಗಳ ಅರಿವಿಲ್ಲದಿರುವಿಕೆ, ಪರಿಣಾಮಕಾರಿಯಾಗಿರದ ಪಾಠ ಪ್ರವಚನ ಮೊದಲಾದವು ಕಡಿಮೆ ಅಂಕ ಗಳಿಸಲು ಕಾರಣಗಳು. ಇವನ್ನೆಲ್ಲಾ ದೃಷ್ಟಿಯಲ್ಲಿರಿಸಿಕೊಂಡೇ ಎಕ್ಸೆಲ್ ಲಾಂಗ್ ಟರ್ಮ್ ಕೋಚಿಂಗ್ ಸೆಂಟರ್ ಕಾರ್ಯ ನಿರ್ವಹಿಸುತ್ತದೆ.
ರಿಪಿಟರ್ಸ್ ಮನೋವಿಜ್ಞಾನ ಅರ್ಥ ಮಾಡಿಕೊಂಡು, ಅವರು ಅಧಿಕ ಅಂಕ ಗಳಿಸಲು ಬೇಕಾಗುವ ಎಲ್ಲಾ ವಿಧಾನಗಳನ್ನು ಎಕ್ಸೆಲ್ ನಲ್ಲಿ ಹೇಳಿ ಕೊಡಲಾಗುತ್ತದೆ.
ಎಕ್ಸೆಲ್ ನ ವೈಶಿಷ್ಟ್ಯ: ವೈದ್ಯಕೀಯ ಶಿಕ್ಷಣ ಪಡೆಯಲು ರಾಷ್ಟ್ರ ಮಟ್ಟದಲ್ಲಿ ಈ ಬಾರಿ ಸುಮಾರು ಇಪ್ಪತ್ತೈದು ಲಕ್ಷದಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇಂಥ ಕಠಿಣ ಸ್ಪರ್ಧೆಯ ನಡುವೆ ಸೀಮಿತ ಸಂಖ್ಯೆಯ ಸೀಟುಗಳಿರುವಾಗ, ಎಕ್ಸೆಲ್ ನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ. ನೀಟ್ ಬರೆದ 180 ವಿದ್ಯಾರ್ಥಿಗಳ ಪೈಕಿ 176 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. 26 ಮಂದಿಗೆ 550ಕ್ಕಿಂತ ಹೆಚ್ಚು ಅಂಕಗಳು, 11 ವಿದ್ಯಾರ್ಥಿಗಳಿಗೆ 600 ಕ್ಕಿಂತ ಅಧಿಕ ಅಂಕಗಳು ಬಂದಿರುವುದು ಗಮನಾರ್ಹ. 35ನೇಯ ರಾಷ್ಟ್ರೀಯ ಕೆಟಗರಿ ರಾಂಕ್ ಪಡೆದುಕೊಂಡ ಸಂಜನಾ ಈರೈನವರ್ ಭೋಪಾಲ್ ನ ಏಮ್ಸ್ (ಂIIಒS) ನಲ್ಲಿ ಸ್ಥಾನ ಪಡೆದರೆ, 720ರ ಪೈಕಿ 692 ಅಂಕಗಳನ್ನು ಪಡೆದ ಆದಿತ್ ಜೈನ್ ಭುವನೇಶ್ವರದ ಏಮ್ಸ್ ನಲ್ಲಿ ಮೆಡಿಕಲ್ ಕೋರ್ಸ್ ಗೆ ಆಯ್ಕೆಯಾಗಿದ್ದಾರೆ. ಇನ್ನು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 355 ಮಕ್ಕಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶೇ. 100 ಫಲಿತಾಂಶವನ್ನು ಪಡೆದುಕೊಂಡಿದೆ. ಇಂಥ ಅಪೂರ್ವ ಸಾಧನೆಗೆ ಎಕ್ಸೆಲ್ ನಲ್ಲಿರುವ ಪಾಠ ಪ್ರವಚನಗಳು ವ್ಯವಸ್ಥೆಯೇ ಕಾರಣವೆನ್ನುವುದು ವಿದ್ಯಾರ್ಥಿಗಳ ಅಭಿಮತ.
ಹುಡುಗ – ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ : ಎಕ್ಸೆಲ್ ನಲ್ಲಿ ಬಾಲಕ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್, ಪ್ರತ್ಯೇಕ ಸ್ಟಡಿ ಅವರ್, ಯೋಗ ಧ್ಯಾನ ತರಬೇತಿ, ಸ್ಮರಣ ಶಕ್ತಿ ಹೆಚ್ಚಿಸುವ ತಂತ್ರಗಳನ್ನು ಹೇಳಿಕೊಡಲಾಗುತ್ತದೆ. 247 ಆರೋಗ್ಯ ಸೇವೆ, ಬಿಸಿನೀರಿನ ವ್ಯವಸ್ಥೆ, ಲಾಂಡ್ರಿ , ಇ- ಲೈಬ್ರೆರಿ ಮೊದಲಾಗಿ ಹತ್ತಾರು ವಿದ್ಯಾರ್ಥಿ ಸ್ನೇಹಿ ಸೌಕರ್ಯಗಳು ಎಕ್ಸೆಲ್ ನಲ್ಲಿವೆ.
ಪ್ರಾಧ್ಯಾಪಕರು ಎಕ್ಸೆಲ್ ನ ಆಸ್ತಿ
ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದ , ಅನುಭವಿ, ಪ್ರತಿಭಾವಂತ, ಉನ್ನತ ಶೈಕ್ಷಣಿಕ ಅರ್ಹತೆಗಳಿರುವ ಇದೀಗ ಎಕ್ಸೆಲ್ ನಲ್ಲಿ ಇದ್ದಾರೆ. ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಈ ಪ್ರಾಧ್ಯಾಪಕರ ವಿದ್ಯಾರ್ಥಿಗಳು ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ.
ಭೌತವಿಜ್ಞಾನ ವಿಭಾಗ :
*
* ಡಾ.ಸತ್ಯ ನಾರಾಯಣ ಭಟ್: 15 ವರ್ಷಗಳ ಬೋಧನಾನುಭವ
* ರೋಹಿತ್ ಕೋಟೇಶ್ವರ್ : 20 ವರ್ಷಗಳ ಬೋಧನಾನುಭವ
*
* ಮಂಜುಳಾ : 15 ವರ್ಷಗಳ ಬೋಧನಾನುಭವ
* ದಿವ್ಯಾ ಹೆಗಡೆ: 12 ವರ್ಷಗಳ ಬೋಧನಾನುಭವ
* ಮನೋಹರ್ : 10 ವರ್ಷಗಳ ಬೋಧನಾನುಭವ
* ಜೋಸ್ಟಮ್ : 10 ವರ್ಷಗಳ ಬೋಧನಾನುಭವ
* ಶರತ್ ಕ್ರಾಸ್ತಾ : 8 ವರ್ಷಗಳ ಬೋಧನಾನುಭವ.
* ಶ್ರೀನಿಧಿ ರಾಜ್ : 6 ವರ್ಷಗಳ ಬೋಧನಾನುಭವ
*. ಆನಂದ ಧರ್ಣಪ್ಪ ಪೂಜಾರಿ : 20 ವರ್ಷಗಳ ಬೋಧನಾನುಭವ
* ಶಿಲ್ಪಾ : 8 ವರ್ಷಗಳ ಬೋಧನಾನುಭವ.
ರಸಾಯನ ವಿಜ್ಞಾನ
* ಸುಮಂತ್ ಕುಮಾರ್ ಜೈನ್ : 16 ವರ್ಷಗಳ ಬೋಧನಾನುಭವ
* ವೆಂಕಟೇಶ್ : 24 ವರ್ಷಗಳ ಬೋಧನಾನುಭವ
* ಜೈಸ್ ಆಂಟನಿ : 15 ವರ್ಷಗಳ ಬೋಧನಾನುಭವ
* ಕೇಶವ ರಾವ್ : 12 ವರ್ಷಗಳ ಬೋಧನಾನುಭವ
* ಈಶ್ವರ್ ಶರ್ಮ : 10 ವರ್ಷಗಳ ಬೋಧನಾನುಭವ
* ಹರೀಶ್ ಗೌಡ: 8 ವರ್ಷಗಳ ಬೋಧನಾನುಭವ
*
* ವಿಚೇತ್ ಕುಮಾರ್ : 10 ವರ್ಷಗಳ ಬೋಧನಾನುಭವ
ಜೀವ ವಿಜ್ಞಾನ :
* ಚಿಗುರು ಪ್ರಕಾಶ್ : 22 ವರ್ಷಗಳ ಬೋಧನಾನುಭವ
* ಅಜಯ್ ವಿಲ್ಸನ್ : 20 ವರ್ಷಗಳ ಬೋಧನಾನುಭವ
* ನಿಶಾ ಪೂಜಾರಿ : 8 ವರ್ಷಗಳ ಬೋಧನಾನುಭವ.
* ದೀಪಾ : 15 ವರ್ಷಗಳ ಬೋಧನಾನುಭವ
*
* ಸ್ಮಿತಾ : 10 ವರ್ಷಗಳ ಬೋಧನಾನುಭವ
ಪ್ರತಿಭಾವಂತರಿಗೆ ಎಕ್ಸೆಲ್ ನಲ್ಲಿ ರಿಯಾಯಿತಿ: ಈ ಬಾರಿ ದ್ವಿತೀಯ ಪಿಯುಸಿ ಯಲ್ಲಿ 95 ಶೇಕಡಾ ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡ ವರಿಗೆ ಸಂಪೂರ್ಣ ಉಚಿತ ನೀಟ್ ಕೋಚಿಂಗ್, 85 ಶೇಕಡ ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಕೊಂಡವರಿಗೆ ಕಾಲೇಜು ಶುಲ್ಕದಲ್ಲಿ 50ಶೇಕಡಾ ರಿಯಾಯಿತಿ ಇರುತ್ತದೆ. ನೀಟ್ ಪರೀಕ್ಷೆ ಯಲ್ಲಿ 450 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಕೋಚಿಂಗ್ ನೀಡಲಾಗುತ್ತದೆ. 400 ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಫೀಸಿನಲ್ಲಿ 50 ಶೇಕಡಾ ರಿಯಾಯಿತಿ ನೀಡಲಾಗುತ್ತದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ 9880899769, 9902284110 ಸಂಪರ್ಕಿಸಬಹುದು.
ಎಕ್ಸೆಲ್ ವಿದ್ಯಾಸಂಸ್ಥೆ ಸಂಸ್ಥಾಪಕ ಸುಮಂತ್ ಕುಮಾರ್ ಜೈನ್ ಹಿನ್ನಲೆ & ಸಾಧನೆ
ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ, ಕಡಿರುದ್ಯಾವರ ಬಳಿಯ ಬೊಳ್ಳೂರು ಗುತ್ತು ಕುಟುಂಬದ ಶ್ರೀ ಸತೀಶ್ ಕುಮಾರ್ ಜೈನ್ ಹಾಗೂ ಶ್ರೀಮತಿ ಶುಭಲತಾ ದಂಪತಿಗಳ ಪುತ್ರನಾದ ಶ್ರೀ ಸುಮಂತ್ ಕುಮಾರ್ ಜೈನ್ ಅವರು 1987 ರಲ್ಲಿ ಜನಿಸಿದರು.
ಪ್ರಾಥಮಿಕ ಶಿಕ್ಷಣ ವನ್ನು ಬೆಳ್ತಂಗಡಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಿರುದ್ಯಾವರದಲ್ಲಿ ಪೂರೈಸಿ, ಪ್ರೌಢ ಶಿಕ್ಷಣದಿಂದ ತೊಡಗಿ ಪದವಿಯವರೆಗಿನ ಶಿಕ್ಷಣವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಸಂಸ್ಥೆಗಳಲ್ಲಿ ಪಡೆದು, ಉಡುಪಿ ಜಿಲ್ಲೆಯ ಮಣಿಪಾಲ್ ವಿಶ್ವ ವಿದ್ಯಾಲಯದಲ್ಲಿ ರ‍್ಯಾಂಕ್ ಸಹಿತ ರಸಾಯನ ವಿಜ್ಞಾನ ಸ್ನಾತಕೋತ್ತರ ಪದವಿಯನ್ನು ಪಡೆದರು.
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ರಸಾಯನ ವಿಜ್ಞಾನ ಉಪನ್ಯಾಸಕರಾಗಿ ಆಯ್ಕೆಯಾಗಿ, 12 ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದರು. ಅದೇ ಅವಧಿಯಲ್ಲಿ ಸಿಇಟಿ, ನೀಟ್, ಜೆ ಇ ಇ ತರಬೇತುದಾರರಾಗಿ ರಾಜ್ಯದ ವಿವಿಧ ಸಂಸ್ಥೆಗಳಲ್ಲಿ ಬೋಧಿಸುತ್ತಾ ಅನುಭವ ಹೆಚ್ಚಿಸಿಕೊಂಡರು. ಉಪನ್ಯಾಸಕರಾಗಿದ್ದುಕೊಂಡೇ 2016 ರಲ್ಲಿ ಉಜಿರೆಯಲ್ಲಿ ಎಕ್ಸೆಲ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವನ್ನು ತೆರೆದರು. 2019 ರಲ್ಲಿ ಗುರುವಾಯನಕೆರೆಯಲ್ಲಿ ಇನ್ಫಿನಿಟಿ ಶಿಕ್ಷಣ ಪ್ರತಿಷ್ಠಾನ ಸ್ಥಾಪಿಸಿ, ಅದರ ಮೂಲಕ ಎಕ್ಸೆಲ್ ಪದವಿ ಪೂರ್ವ ಕಾಲೇಜನ್ನು ಹಾಗೂ ಎಕ್ಸೆಲ್ ನೀಟ್ ಕೋಚಿಂಗ್ ಸೆಂಟರನ್ನು ತೆರೆದರು.
257 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಕಾಲೇಜಿನಲ್ಲಿ ಇಂದು 2000 ದಷ್ಟು ವಿದ್ಯಾರ್ಥಿಗಳಿದ್ದಾರೆ. ಸುಮಾರು 300 ರಷ್ಟು ಉದ್ಯೋಗಿಗಳಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ನೀಟ್ ಹಾಗೂ ಜೆ ಇ ಇ, ಸಿ ಇ ಟಿ ತರಬೇತಿ ದೊರಕಿ ನೂರಾರು ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಎಐಐಎಂಎಸ್ (AIIMS) ಮೆಡಿಕಲ್ ಕಾಲೇಜುಗಳಲ್ಲಿ ಹಾಗೂ ಐಐಟಿ, ಎನ್ ಐ ಐ ಟಿ, ಹಾಗೂ ಎಂಜಿನಿಯರಿAಗ್ ಕಾಲೇಜುಗಳಲ್ಲಿ ಓದಲು ಅವಕಾಶ ಕಲ್ಪಿಸಿದವರು.
ತಮ್ಮ ಕಾಲೇಜು ಸ್ಥಾಪನೆಯಾದ ಬಳಿಕ ನಿರಂತರವಾಗಿ ದ್ವಿತೀಯ ಪಿಯುಸಿ, ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಹಾಗೂ ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಳ್ಳುವಂತ ಫಲಿತಾಂಶವನ್ನು ದಾಖಲಿಸುತ್ತಾ ಬಂದವರು.
ಈ ಬಾರಿಯ ಫಲಿತಾಂಶದಲ್ಲೂ ರಾಜ್ಯದ ಟಾಪ್ 10ರಲ್ಲಿ ಎಕ್ಸೆಲ್ ನ 8 ವಿದ್ಯಾರ್ಥಿಗಳು ಇರುವುದು ಗಮನಾರ್ಹ ಸಾಧನೆಯಾಗಿದೆ. ಪರೀಕ್ಷೆ ಬರೆದ 455 ವಿದ್ಯಾರ್ಥಿಗಳಲ್ಲಿ ಶೇ 80 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 20 ಶೇ ವಿದ್ಯಾರ್ಥಿಗಳು ಪ್ರಥಮ ದರ್ಜೆ ಯಲ್ಲಿ ಉತ್ತೀರ್ಣರಾಗಿರುವುದರಿಂದ ಪದವಿ ಪೂರ್ವ ಶಿಕ್ಷಣದಲ್ಲಿ ಹೊಸ ಶಕೆ ಪ್ರಾರಂಭಿಸಿದ್ದಾರೆ ಸುಮಂತ್ ಕುಮಾರ್ ಜೈನ್.
ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ 272 ಶಿಕ್ಷಕರಿಗೆ ಏಕ ಕಾಲದಲ್ಲಿ ಸನ್ಮಾನ ಕಾರ್ಯಕ್ರಮವಾದ “ಶತ ಶಿಕ್ಷಕರಿಗೆ ಸಹಸ್ರ ನಮನಗಳು” ರಾಜ್ಯ ಮಟ್ಟದ ವಿಜ್ಞಾನ ಮೇಳ ” ಶೋಧ”, ಕನ್ನಡ ಸಮ್ಮೇಳನ “ಅಕ್ಷರೋತ್ಸವ” ಮೊದಲಾದ ಅಪೂರ್ವ ಕಾರ್ಯಕ್ರಮಗಳ ಮೂಲಕ ಗುರುವಾಯನಕೆರೆಗೆ ಹಲವು ಮಹತ್ವದ ಗಣ್ಯಾತಿಗಣ್ಯರು ಬರುವಂತೆ ಮಾಡಿದವರು.
ಶಿಕ್ಷಣ, ವಿಜ್ಞಾನ, ಸಾಹಿತ್ಯ, ಸಾಂಸ್ಕೃತಿಕ, ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಪ್ರೀತಿ – ಕಾಳಜಿ ಹೊಂದಿ ಅವೆಲ್ಲವನ್ನೂ ಪ್ರೋತ್ಸಾಹಿಸುತ್ತಾ ಬಂದ ಸುಮಂತ್ ಕುಮಾರ್ ಜೈನ್ ಅವರಿಗೆ ಸುವರ್ಣ ರಾಷ್ಟೀಯ ವಾಹಿನಿ ಹಾಗೂ ಕನ್ನಡ ಪ್ರಭ ಪತ್ರಿಕೆಯ “ಉಜ್ವಲ ಉದ್ಯಮಿ ಪ್ರಶಸ್ತಿ” ಬೆಹರಿನ್ – ಇಂಡಿಯಾ ಅಂತಾರಾಷ್ಟ್ರೀಯ ಪ್ರಶಸ್ತಿ, ಮಲೇಷಿಯಾ – ಇಂಡಿಯಾ ಐಕಾನಿಕ್ ಅವಾರ್ಡ್ ಸೇರಿ ಹಲವಾರು ಗೌರವ ಪುರಸ್ಕಾರಗಳು ಸಂದಿವೆ.