ಮರದ ಕೆಳಗೆ ಕಾರ್ ಪಾರ್ಕಿಂಗ್: ಸಂಜೆಯಾದರೂ ಕಾರಿನಿಂದ ಇಳಿಯದ ವ್ಯಕ್ತಿ: ಹತ್ತಿರ ಹೋಗಿ ನೋಡಿದವರಿಗೆ ಶಾಕ್!

ಬೆಂಗಳೂರು: ಮರದ ಕೆಳಗೆ ಕಾರ್ ಪಾರ್ಕಿಂಗ್ ಮಾಡಿ ಸಂಜೆಯಾದರೂ ಕಾರಿನಿಂದ ವ್ಯಕ್ತಿ ಇಳಿಯದೇ ಇದ್ದಾಗ, ಅನುಮಾನಗೊಂಡ ಸ್ಥಳೀಯರು ಕಾರ್ ಹತ್ತಿರ ಹೋಗಿ ನೋಡಿದಾಗ ಶಾಕ್ ಆಗಿದ್ದಾರೆ.

ಕಾರಿನೊಳಗಿದ್ದ 37 ವರ್ಷ ವಯಸ್ಸಿನ ಸಂತೋಷ್ ಪ್ರಸಾದ್ ಸಂಜೆಯಾದರೂ ಕಾರಿನಿಂದ ಕೆಳಗೆ ಇಳಿಯಲೇ ಇಲ್ಲ. ಕಾರಣ ಅವರು ಹೃದಯಾಘಾತದಿಂದ ಕಾರಿನಲ್ಲೇ ಮೃತಪಟ್ಟಿದ್ದರು.
ಹೈ ಶುಗರ್‌ನಿಂದ ಬಳಲುತ್ತಿದ್ದ ಸಂತೋಷ್, ಐಟಿಪಿಎಲ್ ರಸ್ತೆಯ ದೇಸಿ ಮಸಲಾ ಹೋಟೆಲ್ ಮುಂಭಾಗ ಬರುತ್ತಿದ್ದಂತೆಯೇ ಕಾರನ್ನು ಇದ್ದಕ್ಕಿದ್ದಂತೆ ಮರವೊಂದರ ಪಕ್ಕ ಪಾರ್ಕ್ ಮಾಡಿದ್ದಾರೆ. ಮುಂದೇನಾಯ್ತೋ ಏನೋ ಗೊತ್ತಿಲ್ಲ. ಆದರೆ, ಸಂಜೆ ತನಕ ಕಾರಿನಿಂದ ಕೆಳಗೆ ಇಳಿಯಲೇ ಇಲ್ಲ. ಅಲ್ಲೇ ಇದ್ದಾ ಬೀಡಾ ಅಂಗಡಿಯವರಿಗೆ ಅನುಮಾನ ಬಂದು, ಕಾರಿನ ಬಳಿ ಹೋಗಿ ಒಳಗಿದ್ದವರನ್ನು ಕರೆದಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬರದಾಗ ಕಾರಿನ ಗ್ಲಾಸ್ ಒಡೆದಿದ್ದಾರೆ. ಆಗ, ಸಂತೋಷ್ ಸಾವನ್ನಪ್ಪಿರುವುದು ಗೊತ್ತಾಗಿದೆ.

ತಕ್ಷಣವೇ ಬೀಡಾ ಅಂಗಡಿಯ ವ್ಯಕ್ತಿ ಸ್ಥಳೀಯ ಪೊಲೀಸರಿಗೆ ವಿಚಾರ ತಿಳಿಸಿದ್ದು, ಬಳಿಕ ಸ್ಥಳಕ್ಕೆ ಬಂದ ಹೆಚ್‌ಎಎಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಕಾರಿನಲ್ಲಿ ಸಿಕ್ಕ ಐಡಿ ಕಾರ್ಡ್, ಕಾರ್ ನಂಬರ್ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.

ಸದ್ಯ ಹೆಚ್‌ಎಎಲ್ ಪೊಲೀಸರು ಘಟನೆ ಬಗ್ಗೆ ಯುಡಿಆರ್ ದಾಖಲಿಸಿ ತನಿಖೆ ಮುಂದುರಿಸಿದ್ದಾರೆ.

ಇತ್ತೀಚೆಗೆ ಯುವಕ-ಯುವತಿಯರು, ಶಾಲಾ ಮಕ್ಕಳು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿ ಪರಿಣಮಿಸಿದೆ.

error: Content is protected !!