ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ: ಘಟನೆ ಬಗ್ಗೆ ವ್ಯವಸ್ಥಾಪನಾ ಸಮಿತಿಯಿಂದ ನಿರ್ಲಕ್ಷ್ಯ: ಅಸಮಾಧಾನ ಹೊರ ಹಾಕಿದ ಗ್ರಾಮಸ್ಥರು:

 

 

 

 

 

ಬೆಳ್ತಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ಕೆಲವು ಸಮಯಗಳಿಂದ ನಡೆಯುತ್ತಿರುವ ಘಟನೆಗಳಿಂದ ಭಕ್ತರು ಹಾಗೂ ಗ್ರಾಮಸ್ಥರು ಅಸಾಮಾಧಾನಗೊಂಡಿರುವ ಬೆನ್ನಲ್ಲೇ ದೇವಸ್ಥಾನದ ಕಾಣಿಕೆ ಹುಂಡಿಯ ಬೀಗ ಒಡೆದು ಕಳ್ಳತನ ನಡೆದಿದೆ.ಘಟನೆ ಬಗ್ಗೆ ವ್ಯವಸ್ಥಾಪನಾ ಸಮಿತಿ ಮೌನವಾಗಿರುವುದರ ಬಗ್ಗೆ ಭಕ್ತರು ಮತ್ತಷ್ಟು ಬೇಸರ ವ್ಯಕ್ತಪಡಿಸುತಿದ್ದಾರೆ.‌ಶನಿವಾರ ರಾತ್ರಿ ದೇವಸ್ಥಾನದ ನಂದಿ ಬಳಿ ಇರುವ ಕಾಣಿಕೆ ಡಬ್ಬಿ ಒಡೆದು ಕಳ್ಳತನ ನಡೆದಿದೆ.‌ಈ ಬಗ್ಗೆ ಈಗಾಗಲೇ ವ್ಯವಸ್ಥಾಪನಾ ಸಮಿತಿ ಗಮನಕ್ಕೆ ಬಂದರೂ  ಯಾವುದೇ ಕ್ರಮ‌ಕೈಗೊಳ್ಳದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತಿರುವ ಭಕ್ತರು  ವ್ಯವಸ್ಥಾಪನಾ ಸಮಿತಿ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ರಾಜೀನಾಮೆ ನೀಡಬೇಕು.  ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿದೆ. ಅದಲ್ಲದೇ ಎರಡು ದಿನಗಳ ಹಿಂದೆ ಯಾರೋ  ಅಶ್ವತ್ಥ ಕಟ್ಟೆಯ ಗಿಡವನ್ನು ತುಂಡರಿಸಿದ್ದಾರೆ. ಈ ಬಗ್ಗೆ ಕೂಡ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕಳೆದ ಒಂದು ವರುಷಗಳ ಹಿಂದೆ ರಾಜಕೀಯ ರಹಿತವಾಗಿ ಮಾದರಿ ಬ್ರಹ್ಮಕಲಶೋತ್ಸವ ನಡೆದಿದ್ದ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ರೀತಿ ನಡೆಯುತ್ತಿರುವುದು ಭಕ್ತರ ಮನಸ್ಸಿಗೆ ತೀವ್ರ ನೋವು ಉಂಟ್ಟು ಮಾಡುತ್ತಿದೆ.

error: Content is protected !!