ಬೆಳ್ತಂಗಡಿ: ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿ: ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ

ಬೆಳ್ತಂಗಡಿ: ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿಗೆ ಕೋರ್ಟ್ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಸುಳ್ಯ ತಾಲೂಕಿನ ತೊಡಿಕಾನದ ಅಂಡ್ಯಡ್ಕ ನಿವಾಸಿ ರಾಜ(64) ಶಿಕ್ಷೆಗೆ ಒಳಗಾದ ಆರೋಪಿ. ಕಮಲಾ ಕೊಲೆಯಾದ ಮಹಿಳೆ.

ಘಟನೆಯ ವಿವರ : ಆರೋಪಿ ರಾಜ ತನ್ನ ಪತ್ನಿ ಕಮಲಾ ಜೊತೆ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. 2022ರ ಸೆ.04ರಂದು ರಾಜ ಮತ್ತು ಪತ್ನಿ ಕಮಲಾರವರು ರಬ್ಬರ್ ಟ್ಯಾಪಿಂಗ್ ಕೆಲಸ ಕೇಳುತ್ತಾ ಬೆಳ್ತಂಗಡಿ ತಾಲೂಕು ಕೊಯ್ಯರು ಗ್ರಾಮದ ಅಲೆಕ್ಕಿ ಎಂಬಲ್ಲಿನ ಧರ್ಣಪ್ಪ ಗೌಡರವರ ಮನೆಗೆ ತೆರಳಿದ್ದು, ಅಲ್ಲಿ ಅವರಿಗೆ ರಬ್ಬರ್ ಟ್ಯಾಪಿಂಗ್ ಕೆಲಸ ನೀಡಲು ಒಪ್ಪಿ ರಬ್ಬರ್ ತೋಟದಲ್ಲಿರುವ ಶೆಡ್ ರೀತಿಯ ಮನೆಯಲ್ಲಿ ಉಳಿಯಲು ಅವಕಾಶ ನೀಡಿದ್ದಾರೆ.

ರಾಜ ತನ್ನ ಹೆಂಡತಿ ಕಮಲಾರವರ ಜೊತೆ ವಾಸವಿದ್ದ ಆ ಶೆಡ್‌ನಲ್ಲಿ 2022 ಸೆ.06ರಂದು ಸಂಜೆ 5.30ರ ಬಳಿಕ ರಾಜ ತನ್ನ ಹೆಂಡತಿ ಕಮಲಾಳ ಜೊತೆ ಎಂದಿನAತೆ ಕ್ಷುಲಕ್ಕ ಕಾರಣಕ್ಕೆ ಜಗಳ ಮಾಡಿದ್ದು, ರಾತ್ರಿ ರಾಜ ಕೋಪದಿಂದ ತನ್ನ ಹೆಂಡತಿ ಕಮಲಾಳ ಕುತ್ತಿಗೆಯನ್ನು ಒತ್ತಿ ಹಿಡಿದು ಕಮಲಾರವರ ತಲೆಯನ್ನು ನೆಲಕ್ಕೆ ಜೋರಾಗಿ ಗುದ್ದಿ, ಬಳಿಕ ತನ್ನ ಲುಂಗಿಯೊAದನ್ನು ಹರಿದು ಹಗ್ಗದ ರೀತಿ ಮಾಡಿ ಅದರಿಂದ ಕಮಲಾ ರವರ ಕುತ್ತಿಗೆಗೆ ಬಿಗಿದ ಪರಿಣಾಮ ಕಮಲಾರವರು ಮೃತಪಟ್ಟಿದ್ದರು. ನಂತರ ಆರೋಪಿ ಕಮಲಾರವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ರೀತಿ ಬಿಂಬಿಸಿ ಜಾಗದ ಮಾಲೀಕರಾದ ಧರ್ಣಪ್ಪ ಗೌಡರ ಮಗ ಪ್ರಮೋದ್ ರವರಿಗೆ ತಿಳಿಸಿದ್ದಾನೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣದ ಬಗ್ಗೆ ದೂರು ನೀಡಿದ ಪ್ರಕಾರ ದೇರಳಕಟ್ಟೆಯ ವೈದ್ಯಾಧಿಕಾರಿ ಡಾ. ವರ್ಷಾ ಶೆಟ್ಟಿಯವರು ನಡೆಸಿದಾಗ ಕಮಲಾ ಅವರ ಶವ ಪರೀಕ್ಷೆಯಲ್ಲಿ ಇದೊಂದು ಕೊಲೆ ಪ್ರಕರಣವೆಂದು ತಿಳಿದು ಬಂದಿದ್ದು, ಶವ ಪರೀಕ್ಷಾ ವರದಿಯನ್ನು ನೀಡಿದ ಮೇರೆಗೆ ಆರೋಪಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಾಥಮಿಕ ತನಿಖೆಯನ್ನು ಅಂದಿನ ಪೊಲೀಸ್ ಉಪ ನಿರೀಕ್ಷಕರಾದ ನಂದ ಕುಮಾರ್ ಎಮ್.ಎಮ್ ರವರು ನಡೆಸಿದ್ದು ನಂತರ ಪೂರ್ಣ ಪ್ರಮಾಣದ ತನಿಖೆಯನ್ನು ಅಂದಿನ ಬೆಳ್ತಂಗಡಿ ಪೊಲೀಸ್ ಠಾಣೆಯ ನಿರೀಕ್ಷಕರಾದ ಶಿವ ಕುಮಾರ್ ಬಿ ರವರು ಪೂರ್ಣಗೊಳಿಸಿ ಆರೋಪಿಯ ವಿರುದ್ಧ ಕಲಂ 302 ಐಪಿಸಿ ರಂತೆ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದೇ ಇರುವುದರಿಂದ ಆರೋಪಿಯ ವಿರುದ್ಧದ ಆರೋಪವನ್ನು ವೈದ್ಯಕೀಯ ಸಾಕ್ಷ್ಯದ ಸಹಾಯದಿಂದ ರುಜುವಾತು ಮಾಡಲಾಗಿದ್ದು, ಸರ್ಕಾರದ ಪರವಾಗಿ ಎಲ್ಲಾ ಸಾಕ್ಷಿದಾರರ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕರಾದ ಮೋಹನ್ ಕುಮಾರ್.ಬಿ ರವರು ನಡೆಸಿ ವಾದ ಮಂಡಿಸಿರುತ್ತಾರೆ.

ಈ ಪ್ರಕರಣದಲ್ಲಿ ಸಂಪೂರ್ಣ ತನಿಖೆಯನ್ನು ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ ಶ್ರೀ ಶಿವ ಕುಮಾರ್ ಬಿ ರವರು ನಡೆಸಿದ್ದು ದೋಷಾರೋಪಣಾ ಪತ್ರವನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಮೋಹನ್ ಕುಮಾರ್ ಅವರು ವಾದಿಸಿದ್ದಾರೆ.

ದಾಖಲಾದ ಯುಡಿಆರ್ ಪ್ರಕರಣದಲ್ಲಿ ಪಿ ಎಸ್ಐ ನಂದಕುಮಾರ್ ಅವರು ತನಿಖೆ ನಡೆಸಿ ವೈದ್ಯರಿಂದ ಶವ ಪರೀಕ್ಷಾ ವರದಿ ಪಡೆದುಕೊಂಡು ಕಲಂ ಅನ್ನು ಪರಿವರ್ತಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಮಾಡಿ ತನಿಖೆಗೆ ಸಹಕರಿಸಿರುತ್ತಾರೆ. ಬೆಳ್ತಂಗಡಿ ಠಾಣಾ ಹೆಚ್ ಸಿ 741 ವಿಶ್ವನಾಥ್ ಮತ್ತು ಪಿಸಿ 2466 ಬಸವರಾಜು ರವರು ಆರೊಪಿ ಪತ್ತೆಗೆ ಪಿ ಎಸೈರವರಿಗೆ ಸಹಕರಿಸಿರುತ್ತಾರೆ. ಪ್ರಕರಣದಲ್ಲಿತನಿಖಾ ಸಹಾಯಕರಾಗಿ ವಿಜಯ್ ಕುಮಾರ್ ರೈ ಸಿಹೆಚ್‌ಸಿ 301 ಬೆಳ್ತಂಗಡಿ ಗ್ರಾಮಾಂತರ ವೃತ್ತ ಕಛೇರಿ, ಹಾಗೂ ಸುನೀತಾ , ಮಹೆಚ್ ಸಿ 907 ಬೆಳ್ತಂಗಡಿ ಪೊಲೀಸ್ ಠಾಣೆ ರವರು ಸಹಕರಿಸಿರುತ್ತಾರೆ. ಮಾನ್ಯ ನ್ಯಾಯಾಲಯದಲ್ಲಿ ಕರ್ತವ್ಯದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಪಿಸಿ2406 ವಿನಯ ಪ್ರಸನ್ನ ಮತ್ತು ಪಿಸಿ 2464 ಜಗದೀಶ್ ರವರು ಸಹಕರಿಸಿದ್ದಾರೆ.

error: Content is protected !!