ಮಿತ್ತಬಾಗಿಲು ಕಾಡು ಹಂದಿ ಬೇಟೆ: ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ : ಯಾವುದೋ ಆಯುಧಗಳಿಂದ ಕಾಡುಹಂದಿ ಮೇಲೆ ದಾಳಿ ಮಾಡಿದ ಪ್ರಕರಣ ಸಂಬAಧ ವೈದ್ಯರ ವರದಿ ಮೇರೆಗೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಹೊಸಬೆಟ್ಟು ನಿವಾಸಿ ಬಾಬು ಗೌಡರ ತೋಟದಲ್ಲಿ ಒಂದು ವರ್ಷ ಪ್ರಾಯದ 26 ಕೆ.ಜಿ ತೂಕದ ಹೆಣ್ಣು ಕಾಡುಹಂದಿಯನ್ನು ಜ.23 ರಂದು ಜಾನು ಗೌಡ ಎಂಬಾತ ಆಯುಧದಿಂದ ದಾಳಿ ಮಾಡಿ ಸಾವಿಗೆ ಕಾರಣವಾಗಿದ್ದು, ಈ ಘಟನೆ ಬಗ್ಗೆ ಸ್ಥಳೀಯರು ಬೆಳ್ತಂಗಡಿ ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್.ಎಫ್.ಓ ತ್ಯಾಗರಾಜ್ ಮತ್ತು ತಂಡ ಜ.23 ರಂದು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಬೆಳ್ತಂಗಡಿ ಗೋ ಮತ್ತು ಪಶು ಇಲಾಖೆಯ ವೈದ್ಯರಿಂದ ಶವ ಪರೀಕ್ಷೆ ಮಾಡಿಸಿ ಯಾವ ವಸ್ತುವಿನಿಂದ ಗಾಯಗೊಳಿಸಿ ಸಾಯಿಸಲಾಗಿದೆ ಎಂದು ವರದಿ ಕೇಳಿದ್ದರು.

ಈ ಬಗ್ಗೆ ಪಶು ವೈದ್ಯರು ಜ.26 ರಂದು ಅಯುಧದಿಂದ ಗಾಯಗೊಳಿಸಿ ಸಾಯಿಸಿರುವುದಾಗಿ ವರದಿ ನೀಡಿದ್ದು ಅದರಂತೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಆರೋಪಿ ಮಿತ್ತಬಾಗಿಲು ಗ್ರಾಮದ ಹೊಸಬೆಟ್ಟು ನಿವಾಸಿ ಬಾಬು ಗೌಡರ ಮಗ ಜಾನು ಗೌಡ ವಿರುದ್ಧ ಜ.27 ರಂದು ಅರಣ್ಯ ಕಾಯ್ದೆ 9,39,51 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

error: Content is protected !!