ಗುರುವಾಯನಕೆರೆ: ಕುವೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ ಮತ್ತು ಜಾತ್ರಾ ಮಹೋತ್ಸವವು ಫೆ.9ರಿಂದ ಫೆ.13ರ ತನಕ ನಡೆಯಲಿದ್ದು, ಇಂದು (ಫೆ.07) ಕಾರ್ಯಾಲಯದ ಉದ್ಘಾಟನೆಗೊಂಡಿದೆ.
ಪ್ರಧಾನ ಅರ್ಚಕರಾದ ರತ್ನಾಕರ ನೂರಿತ್ತಾಯ ಅವರು ಪೂಜಾ ವಿಧಿವಿಧಾನವನ್ನು ನೆರವೇರಿಸಿದ ಬಳಿಕ ಸಾಯಿ ಕುಮಾರ್ ಶೆಟ್ಟಿ ನವಶಕ್ತಿ ಶಕ್ತಿನಗರ ಇವರು ದೀಪ ಬೆಳಗಿ ಕಾರ್ಯಾಲಯ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್ ಕಡಂಬು, ಪ್ರವೀಣ್ ಕುಮಾರ್ ಅಜ್ರಿ ಪಡ್ಯಾರು ಬೀಡು, ಬ್ರಹ್ಮಕುಂಭಾಭಿಷೇಕ ಸಮಿತಿಯ ಕಾರ್ಯಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ, ಪಾಡ್ಯಾರು, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ, ವಾತ್ಸಲ್ಯ , ಪ್ರಮುಖರಾದ , ಸುನೀಶ್ ಕುಮಾರ್,ಆನಂದ ಶೆಟ್ಟಿ ವಾತ್ಸಲ್ಯ, ಸುಭಾಷ್ ಚಂದ್ರ ಜೈನ್ ಶ್ರೀ ಸ್ವಸ್ತಿಕ್, ಸೀತಾರಾಮ ಶೆಟ್ಟಿ ವೈಭವ್, ರಾಜಪ್ಪ ಶೆಟ್ಟಿ ಸುಧೇಕ್ಕಾರ್, ಗೋಪಿನಾಥ್ ನಾಯಕ್, ಕಾರ್ಯಾಲಯ ಸಮಿತಿ ಸಂಚಾಲಕ ರಾಮಚಂದ್ರ ಶೆಟ್ಟಿ, ಸಹ ಸಂಚಾಲಕ ವಸಂತ ಗೌಡ ವರಕಬೆ, ಆನಂದ ಕೋಟ್ಯಾನ್, ಸುಧಾಮಣಿ, ಪ್ರಿಯಾ ಹೆಗ್ಡೆ, ಶ್ರೀಮತಿ ಮಂಗಳಾ, ಪ್ರಜ್ವಲ್ ಶೆಟ್ಟಿ ಪಾಡ್ಯಾರು, ನಾರಾಯಣ ಪೂಜಾರಿ ಕಡಂಬು, ಮಧುರಾಜ್ ಹಾಗೂ ವಿತೇಶ್ ಜೈನ್ ಪಡಂಗಡಿ, ರಮಾನಂದ ಸಾಲ್ಯಾನ್, ದಾಮೋದರ್, ತಿಲಕ್ ರಾಜ್, ನಾರಾಯಣ ಆಚಾರ್ಯ ಬರಾಯ, ವಿತೇಶ್ ಬಂಗೇರ ಉಪಸ್ಥಿತರಿದ್ದರು.
ನಿತಿನ್ ಬಂಗೇರ ಬರಾಯ ಕಾರ್ಯಕ್ರಮ ನಿರೂಪಿಸಿದರು.