ಉತ್ತರ ಪ್ರದೇಶ: ಉತ್ತರ ಪ್ರದೇಶದ ಅಯೋಧ್ಯಾ ನಗರಿಯ ಸರಯೂ ನದಿ ತೀರದಲ್ಲಿ ನಿನ್ನೆ 8ನೇ ವರ್ಷದ ದೀಪಾವಳಿ ದೀಪೋತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯಿತು.
25 ಲಕ್ಷ ಹಣತೆಗಳು ಬೆಳಗಿ ನೋಡುಗರ ಕಣ್ಸೆಳೆದಿತ್ತು, ಕಣ್ಣು ಹಾಯಿಸಿದಲ್ಲೆಲ್ಲ ಹಬ್ಬದ ಸಡಗರ, ಸಂಭ್ರಮವೇ ಕಂಡುಬಂದಿದ್ದು, ಆಕರ್ಷಕ ಲೇಸರ್ ಶೋ, ಆಗಸದಲ್ಲಿ ಪಟಾಕಿಗಳು ಚಿತ್ತಾರ ಬಿಡಿಸಿದವು.
ಇದೇ ವೇಳೆ ಎರಡು ಗಿನ್ನೆಸ್ ವಿಶ್ವದಾಖಲೆಗಳು ನಿರ್ಮಾಣವಾಗಿದೆ. ಒಂದೆಡೆ ಅತಿ ಹೆಚ್ಚು ಜನರು ಆರತಿ ಬೆಳಗಿದ ದಾಖಲೆಯಾದರೆ ಮತ್ತೊಂದೆಡೆ, ವಿಶ್ವದಲ್ಲೇ ಅತಿ ಹೆಚ್ಚು ಮಣ್ಣಿನ ಹಣತೆಗಳಲ್ಲಿ ಎಣ್ಣೆಯ ದೀಪಗಳನ್ನು ಹಚ್ಚಿದ ದಾಖಲೆಯಾಗಿದೆ. 1,121 ಮಂದಿ ವೇದಾಚಾರ್ಯರು ಸರಯೂ ನದಿಗೆ ಆರತಿ ಎತ್ತಿದರು.