ಆಂಧ್ರಪ್ರದೇಶ: ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಈಗಾಗಲೇ ಹಬ್ಬದ ತಯಾರಿ, ಖರೀದಿ ಕೂಡ ಆರಂಭವಾಗಿದೆ. ಆದರೆ ಈ ಊರಲ್ಲಿ ಮಾತ್ರ ಕಳೆದ 70 ವರ್ಷಗಳಿಂದ ದೀಪಾವಳಿ ಆಚರಣೆ ಮಾಡುತ್ತಿಲ್ಲ. ಅದಕ್ಕೆ ಕಾರಣ ಕೇಳಿದ್ರೆ ನಿಜವಾಗ್ಲೂ ಭಯಾನಕ ಅನ್ನಿಸುತ್ತದೆ.
ಆ ಒಂದು ದಿನ ನಡೆದ ಭೀಕರ ಘಟನೆಯ ಪರಿಣಾಮ ಇಂದಿಗೂ ಆ ಊರಲ್ಲಿ ಬೆಳಕಿನ ಹಬ್ಬದ ಆಚರಣೆ ನಡೆಯುತ್ತಿಲ್ಲ. ಏನಿದು ಘಟನೆ..?
70 ವರ್ಷಗಳ ಹಿಂದೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಕಿತ್ತಂಪೇಟ ಎಂಬ ಗ್ರಾಮದಲ್ಲಿ ದೀಪಾವಳಿ ಹಬ್ಬವನ್ನು ಭರ್ಜರಿಯಾಗಿಯೇ ಆಚರಿಸುತ್ತಿದ್ದರು. ಅಂದು ಇಡೀ ಊರು ತರಕಾರಿಗಳಿಂದ ತುಂಬಿತ್ತು. ಮನೆಯ ಆವರಣದಲ್ಲಿ ಹಸು, ಎಮ್ಮೆ, ಮೇಕೆ, ಕುರಿಗಳು ಹಾಯಾಗಿತ್ತು. ಆದರೆ ದೀಪಾವಳಿಯ ದಿನದ ಸಂಭ್ರಮಾಚರಣೆ ವೇಳೆ, ಬೆಂಕಿಯ ಕಿಡಿಗಳು ಬಿದ್ದು ಮನೆಗಳೆಲ್ಲ ಸುಟ್ಟು ಕರಕಲಾಗಿದ್ದವು. ಈ ಭೀಕರ ಅಗ್ನಿ ದುರಂತದಲ್ಲಿ ಮೂಕ ಜೀವಿಗಳು ಪ್ರಾಣ ಕಳೆದುಕೊಂಡವು. ಆ ದಿನ ಸಂಭ್ರಮದ ಮಧ್ಯೆ ನಡೆದ ಈ ಘಟನೆ ಹಿಂದೆAದಿಗಿAತಲೂ ನಡೆಯದ ಹೆಚ್ಚಿನ ಸಾವುನೋವಿಗೆ ಕಾರಣವಾಗಿತ್ತು.
ಆ ದಿನ ನಡೆದ ದುರಂತ ಘಟನೆ ಊರಿನ ಹಿರಿಯರನ್ನು ಬಹಳಷ್ಟು ಘಾಸಿಗೊಳಿಸಿದ್ದು, ಅಂದಿನಿAದ ಹಿರಿಯರೆಲ್ಲ ಸೇರಿ ದೀಪಾವಳಿಯಂದು ದೀಪಗಳನ್ನು ಹಚ್ಚುವುದನ್ನು ನಿಲ್ಲಿಸಿ ಬಿಟ್ಟರು. ಒಂದೊಮ್ಮೆ ದೀಪಗಳನ್ನು ಹಚ್ಚಿದರೆ ಅನಿಷ್ಟ ಸಂಭವಿಸುತ್ತಿದೆ ಎಂದು ಭಾವಿಸಿದ್ದರು. ಇಂತಹ ಭೀಕರ ಘಟನೆಗಳು ಮುಂದೆ ನಡೆಯಬಾರದು ಎಂಬ ಆಶಯದೊಂದಿಗೆ ಈ ದಿನಗಳಂದು ಗ್ರಾಮದಲ್ಲಿ ಯಾರೂ ಸಂಭ್ರಮಾಚರಣೆ ಮಾಡಬಾರದು ಎಂಬ ತೀರ್ಮಾನಕ್ಕೆ ಬಂದರAತೆ.
ಅಂದು ಗ್ರಾಮದ ಹಿರಿಯರೆಲ್ಲ ಸೇರಿ ತೆಗೆದುಕೊಂಡ ಆ ತೀರ್ಮಾನ, ಆಗ ದೀಪಾವಳಿ ಆಚರಿಸದಿರುವುದು ರೂಢಿಯಾಗಿ ಬರುತ್ತಿದೆ.