ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನವಾಗಿ ಅ.30ರಂದು ಆರೋಗ್ಯದ ವಿಚಾರದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ.
ಜೈಲಿನಿಂದ ಬಂದ ದರ್ಶನ್ ತನ್ನ ಪತ್ನಿ ವಿಜಯಲಕ್ಷ್ಮೀ ಮನೆಗೆ ಬಂದಿದ್ದು, ಅ.31ರಂದು ತಮ್ಮ ಮಗನ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಈ ಮಧ್ಯೆ ದರ್ಶನ್ ಅವರು ಕೆಲವರ ಬಳಿ ಕ್ಷಮೆ ಕೇಳಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಹಾಗಾದ್ರೆ ಅವರು ಕ್ಷಮೆ ಕೇಳಿದ್ದು ಯಾರ ಬಳಿ? ಮುಂದೆ ಓದಿ..
ಕೊಲೆ ಆರೋಪಿಯಾಗುವ ಮುನ್ನ ಆರಾಮದ ಜೀವನ ಅನುಭವಿಸಿದ್ದ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿ ನರಕಯಾತನೆ ಅನುಭವಿಸಿದ್ದಾರೆ. ಹೀಗಾಗಿ ಟಿವಿ ಬೇಕು, ಬೆಡ್ ಬೇಕು ಎಂದು ಪದೇ ಪದೇ ಕೇಳುತ್ತಿದ್ದರು. ಈ ಹಿನ್ನಲೆ ಅವರು ಹೈ ಸೆಕ್ಯುರಿಟಿ ಸೆಲ್‌ನ ಸಿಬ್ಬಂದಿಗಳ ಬಳಿ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.
‘ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ’ ಎಂದು ದರ್ಶನ್ ಕೇಳಿರುವುದಾಗಿ ವರದಿ ಆಗಿದೆ. ಆದರೆ ಹೈ ಸೆಕ್ಯುರಿಟಿ ಸೆಲ್‌ನ ಸಿಬ್ಬಂದಿಗಳು ದರ್ಶನ್ ಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದು, ‘ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ, ಆರೋಗ್ಯದ ಬಗ್ಗೆ ಗಮನ ಕೊಡಿ’ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.