ಬೆಂಗಳೂರು: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ರಾಜ್ಯದಲ್ಲಿ ಭಾರೀ ಮಳೆಯಾಗಿದೆ. ಬೆಂಗಳೂರಿನಲ್ಲAತೂ ವರುಣಾರ್ಭಟಕ್ಕೆ ರಸ್ತೆಯಲ್ಲಿ ನೀರು ತುಂಬಿಕೊAಡಿತ್ತು. ಜನ, ‘ಅಯ್ಯೋ ಏನಪ್ಪಾ ಈ ಮಳೆ’ ಅಂತ ತತ್ತರಿಸಿದ್ರೆ, ಇತ್ತ ಕಳ್ಳರು ಇದೇ ಮಳೆಯ ಪ್ರಯೋಜನವನ್ನು ಪಡೆದು ಬಿಬಿಎಂಪಿ ಪಾರ್ಕ್ನಲ್ಲಿದ್ದ ಶ್ರೀಗಂಧದ ಮರವನ್ನೇ ಕದ್ದಿದ್ದಾರೆ.
ಯಲಹಂಕ ಜುಡಿಷಿಯಲ್ ಲೇಔಟ್‌ನ ಬಿಬಿಎಂಪಿ ಪಾರ್ಕ್ನಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ಮಳೆಯ ನಡುವೆಯೇ ಶ್ರೀಗಂಧದ ಮರವನ್ನು ಕಳ್ಳರು ಕತ್ತರಿಸಿ ಹೊತ್ತೊಯ್ದಿದ್ದಾರೆ. ಬೆಳಗ್ಗೆ ಸ್ಥಳೀಯರು ವಾಕಿಂಗ್‌ಗೆ ಹೋದಾಗ ಮರ ಕಳ್ಳತನವಾಗಿರುವುದನ್ನು ಗಮನಿಸಿದ್ದಾರೆ. ಬಳಿಕ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಉಳಿದ ಶ್ರೀಗಂಧದ ತುಂಡುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.