ಓವರ್‌ಟೇಕ್ ಮಾಡಿದ ಸಂದರ್ಭ ರಸ್ತೆಯಲ್ಲೇ ವಾಹನ ಸವಾರರು ಬೈಯೋದು ಸಾಮಾನ್ಯ. ಆದರೆ ಇದೇ ವಿಚಾರವಾಗಿ ಹೊಡೆದು ಸಾಯಿಸೋದು ಬಹಳ ದೊಡ್ಡ ತಪ್ಪು. ಅಂತಹ ಅಮಾನವೀಯ ಘಟನೆ ಮಹಾರಾಷ್ಟçದಲ್ಲಿ ನಡೆದಿದೆ.
ಓವರ್ ಟೇಕ್ ಮಾಡಿದ ಎಂಬ ಕಾರಣಕ್ಕೆ ಗುಂಪೊಂದು ನಡುರಸ್ತೆಯಲ್ಲೇ ಯುವಕನಿಗೆ ಮನಬಂದಂತೆ ಥಳಿಸಿದ್ದಾರೆ. ತನ್ನ ಮಗನಿಗೆ ಏನೂ ಮಾಡಬೇಡಿ ಎಂದು ಆ ಯುವಕನ ತಾಯಿ ತನ್ನ ಮಗನ ಮೇಲೆ ಮಲಗಿ ಆತನಿಗೆ ಹೊಡೆತ ಬೀಳದಂತೆ ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಭಾರೀ ಹೊಡೆತದಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಮೃತ ಆಕಾಶ್ ಎಂಬಾತ ವಾಹನವನ್ನು ಓವರ್ ಟೇಕ್ ಮಾಡುವ ವಿಚಾರವಾಗಿ ಮಾರ್ಗಮಧ್ಯೆ ಕೆಲವರೊಂದಿಗೆ ವಾಗ್ವಾದ ನಡೆಸಿದ್ದಾನೆ. ಅಷ್ಟರಲ್ಲಿ ಜನರು ಆತನನ್ನು ಥಳಿಸಲು ಆರಂಭಿಸಿದ್ದಾರೆ. ಅಡ್ಡ ಬಂದ ಆತನ ಅಪ್ಪ-ಅಮ್ಮನಿಗೂ ಹೊಡೆದಿದ್ದಾರೆ. ಈ ಹಲ್ಲೆಯ ನಂತರ ಆಕಾಶ್ ಸಾವನ್ನಪ್ಪಿದ್ದಾರೆ. ಮಗನಿಗೆ ಹೊಡೆಯುತ್ತಿದ್ದವರಿಗೆ ಕೈ ಮುಗಿದು ತಾಯಿ ಬೇಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.