ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಇದರ ನೇತೃತ್ವದಲ್ಲಿ “ಯುವಸಿರಿ, ರೈತ ಭಾರತದ ಐಸಿರಿ” ಕಾರ್ಯಕ್ರಮ ಅ.20 ರಂದು ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಬಳಿ ನಡೆಯಲಿದೆ ಎಂದು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ ತಿಳಿಸಿದರು.
ಅವರು ಅ.15 ರಂದು ಉಜಿರೆ ಒಷ್ಯನ್ ಪರ್ಲ್ ಹೋಟೇಲಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ರಾಷ್ಟೀಯ ಸೇವಾ ಯೋಜನಾ ಘಟಕಗಳು, ಉಜಿರೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ಪೋಟ್ಸ್ ಕ್ಲಬ್ ಉಜಿರೆ, ಅಧ್ಯಕ್ಷರು ಹಾಗೂ ಸರ್ವಸದಸ್ಯರು ರೋಟರಿ ಕ್ಲಬ್ ಬೆಳ್ತಂಗಡಿ, ಅಧ್ಯಕ್ಷರು ಹಾಗೂ ಸರ್ವಸದಸ್ಯರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ (ರಿ.) ಬೆಳ್ತಂಗಡಿ, ಅಧ್ಯಕ್ಷರು ಹಾಗೂ ಸರ್ವಸದಸ್ಯರು ವ್ಯವಸ್ಥಾಪನಾ ಸಮಿತಿ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು ಇವುಗಳ ಸಹಯೋಗದಲ್ಲಿ ಈ ಕಾರ್ಯಕ್ರಮದ ನಡೆಯಲಿದೆ. ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಾಲದಲ್ಲಿ ನೇಜಿನಾಟಿ ಮಾಡಲಿದ್ದಾರೆ ಎಂದರು.
ಬೆಳಿಗ್ಗೆ 9 ಗಂಟೆಗೆ ಸೋನಿಯಾ ಯಶೋವರ್ಮ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ, ಶರತ್‌ಕೃಷ್ಣ ಪಡ್ಡೆಟ್ನಾಯ, ಅನುವಂಶಿಕ ಆಡಳಿತ ಮೊತ್ತೇಸರರು, ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ, ಡಾ. ಸತೀಶ್ಚಂದ್ರ ಎಸ್. ಕಾರ್ಯದರ್ಶಿಗಳು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು (ರಿ), ಉಜಿರೆ, ಡಾ.ಬಿ.ಎ. ಕುಮಾರ ಹೆಗ್ಡೆ, ಪ್ರಾಂಶುಪಾಲರು, ಶ್ರೀ ಧ.ಮಂ. ಕಾಲೇಜು (ಸ್ಥಾಯತ್ತ) ಉಜಿರೆ, ಕೆ.ಎನ್. ಜನಾರ್ದನ್, ಎಂ.ಡಿ. ಸಿರಿ ಗ್ರಾಮೋದ್ಯೋಗ ಸಂಸ್ಥೆ, ರವೀಶ್ ಪಡುಮಲೆ, ವಿಭಾಗ ಮುಖ್ಯಸ್ಥರು, ಸಿವಿಲ್ ಡಿಪಾರ್ಟ್ಮೆಂಟ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜು, ಉಜಿರೆ, ರೋ ಪೂರನ್ ವರ್ಮ, ಅಧ್ಯಕ್ಷರು, ರೋಟರಿ ಕ್ಲಬ್ ಬೆಳ್ತಂಗಡಿ, ಚೈತೇಶ್ ಇಳಂತಿಲ, ಅಧ್ಯಕ್ಷರು, ಪತ್ರಕರ್ತರ ಸಂಘ, ಬೆಳ್ತಂಗಡಿ, ಬಿ.ಕೆ. ಧನಂಜಯ ರಾವ್, ಅಧ್ಯಕ್ಷರು, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ) ಉಜಿರೆ, ಶ್ರೀನಿವಾಸ್ ಗೌಡ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಅನಂತಪದ್ಮನಾಭ ದೇವಸ್ಥಾನ, ಜನಂತೋಡಿ, ಬೆಳಾಲು, ಜೇಮ್ಸ್ ಅಬ್ರಹಾಂ, ಹಿರಿಯ ಉಪನ್ಯಾಸಕರು, ರುಡ್‌ಸೆಟ್ ಸಂಸ್ಥೆ ಧರ್ಮಸ್ಥಳ, ಬಾಲಕೃಷ್ಣ ಪೂಜಾರಿ, ಕೃಷಿ ವಿಭಾಗ ಧರ್ಮಸ್ಥಳ ಭಾಗಿಯಾಗಲಿದ್ದಾರೆ ಎಂದರು.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿ.ಕೆ ದೇವರಾವ್ ಇವರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ರಾಜೇಶ್ ಪೈ, ಎಸ್ ಡಿ ಎಂ ರಾಷ್ಟೀಯ ಸೇವಾ ಯೋಜನಾಧಿಕಾರಿ ಮಹೇಶ್ ಕುಮಾರ್ ಶೆಟ್ಟಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್, ನಿಕಟಪೂರ್ವ ಕಾರ್ಯದರ್ಶಿ ಶ್ರೀಧರ ಕೆ.ವಿ ಉಪಸ್ಥಿತರಿದ್ದರು.