ಕೊರೋನಾ ಲಸಿಕೆ ಕೋವಾಕ್ಸಿನ್‌ನಲ್ಲೂ ಅಡ್ಡ ಪರಿಣಾಮ!: ಹೃದಯ, ಚರ್ಮ, ನರ, ಸ್ನಾಯುಗಳ ಅಸ್ವಸ್ಥತೆ ಗೋಚರ: ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಸಂಶೋಧನ ವರದಿ

ನವದೆಹಲಿ: ಕೊರೋನಾ ಸಮಯದಲ್ಲಿ ಮುಂಜಾಗೃತವಾಗಿ ನೀಡಿದ್ದ ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮವಿದೆ ಎಂದು ಕಂಪನಿ ಒಪ್ಪಿಕೊಂಡ ಬಳಿಕ ಕೋವಾಕ್ಸಿನ್ ಬಗ್ಗೆಯೂ ಸಂಶೋಧನೆ ನಡೆದಿದೆ. ಈ ಲಸಿಕೆಯಲ್ಲೂ ಅಡ್ಡಪರಿಣಾಮ ಇದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ತನ್ನ ಸಂಶೋಧನ ವರದಿಯಲ್ಲಿ ತಿಳಿಸಿದೆ.

ಕೋವಾಕ್ಸಿನ್ ಕುರಿತು ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ 635 ಮಕ್ಕಳು ಹಾಗೂ 291 ವಯಸ್ಕರು ಭಾಗವಹಿಸಿದ್ದರು. ದತ್ತಾಂಶಗಳ ಅನುಸಾರ ಶೇ. 33 ಜನರಿಗೆ ಕೋವಾಕ್ಸಿನ್ ಲಸಿಕೆಯಿಂದ ಆರೋಗ್ಯದಲ್ಲಿ ಅಡ್ಡಪರಿಣಾಮ ಕಂಡು ಬಂದಿದೆ. ಹೃದಯ, ಚರ್ಮ, ನರ, ಸ್ನಾಯುಗಳಿಗೆ ಸಂಬಂಧಿಸಿದಂತೆ ಅಸ್ವಸ್ಥತೆ ಉಂಟಾಗಿದೆ. ಶೇ.4.6 ಮಹಿಳೆಯರಿಗೆ ಮುಟ್ಟಿನ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

error: Content is protected !!