ಬೆಳ್ತಂಗಡಿ: ಪತ್ರಕರ್ತರ ಸಂಘದಿಂದ ಮಾಜಿ ಶಾಸಕ ವಸಂತ ಬಂಗೇರ ನುಡಿನಮನ ಕಾರ್ಯಕ್ರಮ

ಬೆಳ್ತಂಗಡಿ: ಹಿರಿಯ ರಾಜಕಾರಣಿ ಬೆಳ್ತಂಗಡಿ ತಾಲೂಕಿನಲ್ಲಿ 5 ಬಾರಿ ಶಾಸಕರಾಗಿದ್ದ ನಿಷ್ಠುರ ರಾಜಕಾರಣಿ ದಿ.  ವಸಂತ ಬಂಗೇರರಿಗೆ ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನುಡಿ ನಮನ ಕಾರ್ಯಕ್ರಮವು ಸಂಘದ ಕಛೇರಿಯಲ್ಲಿ ಶನಿವಾರ ನಡೆಯಿತು.

ಪತ್ರಕರ್ತರಾದ ಶಿಬಿ ಧರ್ಮಸ್ಥಳ, ಪುಷ್ಪರಾಜ್ ಶೆಟ್ಟಿ, ಶ್ರೀನಿವಾಸ ತಂತ್ರಿ, ಬಿ ಎಸ್ .ಕುಲಾಲ್ ,ಮನೋಹರ್ ಬಳೆಂಜ, ಪ್ರಸಾದ್ ಶೆಟ್ಟಿ ಎಣಿಂಜೆ ಬಂಗೇರರಿಗೆ ತಾಲೂಕಿನ ಜನತೆಯ ಬಗ್ಗೆ ಇದ್ದ ಕಾಳಜಿ ಹಾಗೂ ಅವರ ರಾಜಕೀಯ ಜೀವನದ ಬಗ್ಗೆ ವಿವರಿಸಿ ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರುಗಳಾದ ಹೃಷಿಕೇಶ್ ಧರ್ಮಸ್ಥಳ, ಅರವಿಂದ ಹೆಬ್ಬಾರ್, ಜಾರಪ್ಪ ಪೂಜಾರಿ, ಆಚುಶ್ರೀ ಬಾಂಗೇರೂ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಚೈತ್ರೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ .ಬಿ. ಶಿರ್ಲಾಲ್ ನಿರೂಪಿಸಿದರು.

error: Content is protected !!