‘ಕೋವಿಶೀಲ್ಡ್’ ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮ: ಪಾರ್ಶ್ವವಾಯು, ಹೃದಯಸ್ತಂಭನ, ಥ್ರೊಂಬೋಸಿಸ್‌ಗೆ ಕಾರಣ: ನ್ಯಾಯಾಲಯದಲ್ಲಿ ಸತ್ಯ ಹೇಳಿ ತಪ್ಪೊಪ್ಪಿಕೊಂಡ ಕಂಪನಿ!

ಕೊರೋನಾ ಸಂದರ್ಭದಲ್ಲಿ ಪ್ರಾಣ ಉಳಿದುಕೊಂಡಿರುವುದೇ ಹೆಚ್ಚು ಎಂದು ಭಾವಿಸಿರುವ ಭಾರತದ ಕೋಟ್ಯಾಂತರ ಜನರಿಗೆ ಈಗ ಪ್ರಾಣ ಭಯ ಆರಂಭವಾಗಿದೆ. ಕೊರೋನಾ ಬರೋದೇ ಇಲ್ಲ ಎಂದು ನಂಬಿಸಿ ಕೊಟ್ಟಿರುವ ಲಸಿಕೆಯೆ ಈಗ ಪ್ರಾಣಕ್ಕೆ ಕುತ್ತು ತಂದಿದೆ. ಈ ಲಸಿಕೆಯಿಂದ ಅಡ್ಡಪರಿಣಾಮವಿದೆ ಎಂದು ಸ್ವತಃ ಲಸಿಕೆ ತಯಾರಿಸಿದ ಕಂಪನಿಯೆ ಲಂಡನ್‌  ನ್ಯಾಯಾಲಯದಲ್ಲಿ ಸತ್ಯ ಹೇಳಿದೆ.

ಬ್ರಿಟನ್ ನಿವಾಸಿ ಜೆಮಿ ಸ್ಕಾಟ್ ನೀಡಿದ್ದ ದೂರಿನ ವಿಚಾರಣೆಯ ಸಂದರ್ಭದಲ್ಲಿ ಈ ಸತ್ಯವನ್ನು ಬ್ರಿಟಿಷ್ ಫಾರ್ಮಾ ಅಸ್ಟ್ರಾಜೆನೆಕಾ ಒಪ್ಪಿಕೊಂಡಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಮೆದುಳು ಅಥವಾ ದೇಹದ ಇತರೆ ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟುವುದು, ಪ್ಲೇಟ್ ಲೆಟ್‌ಗಳ ಸಂಖ್ಯೆ ಕಡಿಮೆಯಾಗುವುದರ ಬಗ್ಗೆ ಜೆಮಿ ಸ್ಕಾಟ್ ದೂರು ನೀಡಿದ್ದರು. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ತನ್ನ ಲಸಿಕೆಯಿಂದ ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮ ಉಂಟಾಗಬಹುದು, ಆದ್ದರಿಂದ ಈ ಕುರಿತು ವಿಸ್ತೃತ ಅಧ್ಯಯನದ ಅಗತ್ಯವಿದೆ ಎಂದು ಹೇಳಿದೆ.

ಯಾವ ರೀತಿಯ ಅಡ್ಡಪರಿಣಾಮ..?

ಅಸ್ಟ್ರಾಜೆನೆಕಾ ಲಸಿಕೆಯನ್ನೇ ಭಾರತದ ಪುಣೆ ಮೂಲ ಸೀರಂ ಇನ್‌ಸ್ಟಿಟ್ಯೂಟ್ ಕೋವಿಶೀಲ್ಡ್ ಹೆಸರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದೇ ಲಸಿಕೆಯನ್ನೇ ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ನೀಡಲಾಗಿತ್ತು. ಕೊರೋನಾ ಸಮಯದಲ್ಲಿ ಕೋವಿಶೀಲ್ಡ್ ಪರಿಣಾಮಕಾರಿಯಾದ ಅತ್ಯುತ್ತಮ ಲಸಿಕೆ ಎಂದು ಬಿಂಬಿಸಲಾಗಿತ್ತು. ಆದರೆ ಇದೀಗ ಇದೇ ಲಸಿಕೆಯಿಂದ ಅಡ್ಡಪರಿಣಾಮವಿದೆ ಎಂದಿದೆ ಕಂಪನಿ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆ ಹೆಚ್ಚಿದ್ದು ಪಾರ್ಶ್ವವಾಯು, ಹೃದಯಸ್ತಂಭನ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಜೊತೆಗೆ ಇದು ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನೂ ಕೂಡ ಕಡಿಮೆ ಮಾಡುತ್ತದೆ , ಲಸಿಕೆ ಪಡೆದವರು ಥ್ರೊಂಬೋಸಿಸ್ ಎಂಬ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಕಂಪನಿ ತಿಳಿಸಿದೆ.

ಬಹಳ ಮುಖ್ಯವಾಗಿ ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ ವ್ಯಕ್ತಿಯು ಸಾವನ್ನಪ್ಪುವ ಸಾಧ್ಯತೆಯೂ ಇರುತ್ತದೆ ಎಂಬುದಾಗಿ ಸಂಸ್ಥೆ ತಪ್ಪೊಪ್ಪಿಕೊಂಡಿದೆ.

ಕೊರೋನಾ ಅವಧಿ ಮುಗಿದ ಬಳಿಕ ಭಾರತದಲ್ಲಿ ಅತೀ ಹೆಚ್ಚು ಜನ ಹಟಾತ್ ಹೃದಯಘಾತಕ್ಕೆ ಒಳಗಾಗಿ ಸಾಯುತ್ತಿದ್ದಾರೆ. ಕುಂತಲ್ಲಿ, ನಿಂತಲ್ಲಿ, ಮಲಗಿದ್ದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಡಾನ್ಸ್ ಮಾಡುತ್ತಿದ್ದವರು, ನಾಟಕ, ಯಕ್ಷಗಾನ ಕಲಾವಿದರು, ದೈವನರ್ತಕರು, ಆಟಗಾರರು ಹೀಗೆ ಅನೇಕರು ಹೃದಯಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಬಹಳ ಮುಖ್ಯವಾಗಿ ಯುವಜನರು ‘ಸಡನ್ ಡೆತ್’ ಗೆ ಒಳಗಾಗುತ್ತಿದ್ದಾರೆ. 9ನೇ ತರಗತಿಯ ಮಕ್ಕಳೂ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಆತಂಕಕಾರಿ.

ಕೊರೋನಾ ಲಸಿಕೆ ನೀಡುತ್ತಿದ್ದ ಸಂದರ್ಭದಲ್ಲಿ ಲಸಿಕೆ ಬೇಡ ಎಂದು ನಿರಾಕರಿಸಿದ ಅನೇಕರಿಗೆ ಒತ್ತಾಯಪೂರ್ವಕವಾಗಿ ಲಸಿಕೆ ನೀಡಲಾಗಿದೆ. ಲಸಿಕೆ ಪಡೆದುಕೊಳ್ಳದ ಹೊರತು ಕಂಪನಿಗಳು ಉದ್ಯೋಗಿಗಳನ್ನು ಕಂಪನಿಗೆ ಸೇರಿಸಿಕೊಳ್ಳುತ್ತಿರಲಿಲ್ಲ. ರೈಲು, ವಿಮಾನ ಪ್ರಯಾಣಕ್ಕೂ ಲಸಿಕೆ ಪಡೆದ ಪತ್ರ ಮುಖ್ಯವಾಗಿತ್ತು. ಲಿಸಿಕೆ ಪಡೆಯದವರಿಗೆ ಉದ್ಯೋಗವಿಲ್ಲ, ಸರಕಾರದ ಸವಲತ್ತುಗಳಿಲ್ಲ ಎಂದು ಹೆದರಿಸಲಾಗಿತ್ತು. ಆದರೆ ಈಗ ಲಸಿಕೆ ಪಡೆದವರೇ ಹೆದರುವಂತಾಗಿದೆ. ಒತ್ತಾಯಪೂರ್ವಕವಾಗಿ ಲಸಿಕೆ ನೀಡುವ ಕಾರ್ಯಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ ಬಳಿಕ ಲಸಿಕೆ ನಿರಾಕರಿಸಿದವರು ನಿಟ್ಟುಸಿರು ಬಿಟ್ಟಿದ್ದಾರೆ. ಈಗಲೂ ಲಸಿಕೆ ಪಡೆಯದವರು ನಾವು ಬಚಾವ್ ಎಂದು ಭಾವಿಸುವಂತಾಗಿದೆ.

error: Content is protected !!