
ಬೆಳ್ತಂಗಡಿ: ಚಂಡಮಾರುತದ ಪ್ರಭಾವದಿಂದಾಗಿ ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಕೆಲವು ದಿನಗಳಲ್ಲಿ ಹಲವಾರು ಶುಭ ಸಮಾರಂಭಗಳು ನಿಗದಿಯಾಗಿದ್ದು, ಅಕಾಲಿಕ ಮಳೆಯಿಂದ ಆಯೋಜನೆಗೆ ಅಡ್ಡಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಹಲವೆಡೆ, ಮೂಡುಬಿದಿರೆ, ಪುತ್ತೂರು ತಾಲೂಕು ಸೇರಿದಂತೆ ಭರ್ಜರಿ ಮಳೆಯಾಗಿದ್ದು ಕೃಷಿಕರು ತಮ್ಮ ಬೆಳೆ ರಕ್ಷಿಸಿಕೊಳ್ಳಲು ಪರದಾಡಿದ್ದಾರೆ. ಮಿಂಚು, ಗುಡುಗು ಸಹಿತ ಮಳೆಯಾಗಿದ್ದು, ವಿವಿಧೆಡೆ ಹಾನಿ ಉಂಟಾಗಿದೆ. ಪುತ್ತೂರು – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಮಳೆಯ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.ಅದಲ್ಲದೇ ಶಾಲೆ ಬಿಡುವ ಸಮಯದಲ್ಲಿ ಮಳೆ ಬಂದಿರುವುದರಿಂದ ವಿದ್ಯಾರ್ಥಿಗಳೂ ಒದ್ದೆಯಾಗುತ್ತ ತೊಂದರೆ ಅನುಭವಿಸಿದರು.

ಇನ್ನು ಕಾಮಗಾರಿ, ಮನೆನಿರ್ಮಾಣ, ದ್ವಿಚಕ್ರ ವಾಹನಗಳಲ್ಲಿ ಸಂಚಾರ ಮಾಡುವವರು ಅಕಾಲಿಕ ಮಳೆಯಿಂದ ಸಮಸ್ಯೆ ಅನುಭವಿಸಿದರು.
https://youtube.com/shorts/PtLaKOgNTHU?si=YhmeJthFC6To82Ym
ತಾಲೂಕಿನ ಪಡಂಗಡಿ ಗ್ರಾಮದ ಮಲ್ಲಜೆ ಎಂಬಲ್ಲಿ ಸಂಜೆ 5.30ಕ್ಕೆ ಅಕೇಶಿಯ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರ ಪುಡಿ ಪುಡಿಯಾಗಿದೆಯಲ್ಲದೇ ಅದರ ಸುತ್ತಮುತ್ತಲ ಸುಮಾರು 50 ಅಡಿ ಮಣ್ಣು ಕಿತ್ತು ಹೋಗಿ ಗದ್ದೆಯಂತಾಗಿದೆ. ಸಮೀಪದಲ್ಲಿ ಮನೆ , ಜನ ಸಂಚಾರ ಇಲ್ಲದಿದ್ದುದರಿಂದ ದೊಡ್ಡ ಅಪಾಯ ತಪ್ಪಿದೆ.