
ಬೆಳ್ತಂಗಡಿ : ತಾಲೂಕು ಆಡಳಿತ ಜನರ ಬಳಿಗೆ ಎಂಬ ಶಾಸಕರ ಅಧ್ಯಕ್ಚತೆಯ ಜನಸ್ಪಂದನ ಸಭೆ ಬಾರ್ಯ ಗ್ತಾಮ ಪಂಚಾಯತ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಇಲ್ಲಿಯ ಅವ್ಯವಸ್ಥೆಯ ಬಗ್ಗೆ ಶಾಸಕ ಹರೀಶ್ ಪೂಂಜ ಆಕ್ರೋಶ ಹೊರಹಾಕಿದ ಘಟನೆ ಬಾರ್ಯ ಗ್ರಾಮ ಪಂಚಾಯತ್ ನಲ್ಲಿ ಶನಿವಾರ ನಡೆದಿದೆ.
ಗ್ರಾಮಸ್ಥರಿಗೆ ಭಾಗವಹಿಸಲು ಚಿಕ್ಕ ಸಭಾಂಗಣ, ಕೆಟ್ಟು ಹೋದ ಧ್ವನಿ ವರ್ಧಕ ಸೇರಿದಂತೆ
ಅತ್ಯಂತ ಅವ್ಯವಸ್ಥೆಯಿಂದ ಕೂಡಿದ್ದು ಸಭೆಯ ಅವ್ಯವಸ್ಥೆಯನ್ನು ಕಂಡು ಶಾಸಕ ಹರೀಶ್ ಪೂಂಜ ಅವರು ಸಭೆಯ ಪ್ರಾರಂಭದಲ್ಲೇ ಪಂ. ಅಭಿವೃದ್ಧಿ ಅಧಿಕಾರಿಯ ವಿರುದ್ಧ ಖಂಡನೆ ವ್ಯಕ್ತಪಡಿಸಿ ಶಿಸ್ತುಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರಿಗೆ ಸೂಚಿಸಿದ
ಪ್ರಸಂಗ ನಡೆಯಿತು.ಜನಸ್ಪಂದನ ಸಭೆಯಲ್ಲಿ
ಜನಪ್ರತಿನಿಧಿಗಳು,ತಹಶಿಲ್ದಾರ್,
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ , ಅರಣ್ಯ ಇಲಾಖಾಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು
ಸೇರಿದಂತೆ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ಮಾಜಿ ತಾ.ಪಂ.ಸದಸ್ಯ ಮಂಜುನಾಥ ಸಾಲ್ಯಾನ್ ಅವರು ಮಂಗಗಳ ಹಾವಳಿಯಿಂದ
ಕೃಷಿಕರಿಗಾಗುವ ತೊಂದರೆಯನ್ನು ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ತರಲು ಮಂಗ, ತಿಂದ ತೆಂಗಿನ ಚಿಪ್ಪುಗಳ ಮೂಟೆಯನ್ನು ತಲೆಯಲ್ಲಿ ಹೊತ್ತು ವೇದಿಕೆಯತ್ತ ಬಂದು ಅರಣ್ಯ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.