ಸಿನಿಲೋಕದಲ್ಲಿ ಸದ್ದು ಮಾಡುತ್ತಿದೆ ‘ಪುಷ್ಪ 2’: ಶೀಘ್ರದಲ್ಲೇ ಸಾಂಗ್ ರಿಲೀಸ್

ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಬಿಡುಗಡೆಗೊಂಡ ಬಳಿಕ ಭಾರೀ ಸದ್ದು ಮಾಡಿತ್ತು. ಸಿನಿಮಾದ ಕಥೆ, ಹಾಡು, ನಿರ್ದೇಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಮಾತ್ರವಲ್ಲದೆ ಸಿನಿಮಾ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದೆ. ಆದರೆ ಇದೀಗ ಪುಷ್ಟ 2 ಚಿತ್ರ ರಿಲೀಸ್ ಆಗಲು ಸಜ್ಜಾಗಿದ್ದು ಶೀಘ್ರದಲ್ಲೇ ಅದರ ಹಾಡು ಬಿಡುಗಡೆ ಕಾಣಲಿದೆ ಎಂದು ತಿಳಿದು ಬಂದಿದೆ.

‘ಪುಷ್ಪ 2: ದಿ ರೂಲ್’ ಇದೇ ಆಗಸ್ಟ್ 15ರಂದು ಚಿತ್ರಮಂದಿರ ಪ್ರವೇಶಿಸಲಿದೆ ಎಂಬ ಮಾಹಿತಿ ಇದೆ. ಚಿತ್ರ ತಂಡವು ತನ್ನ ಮೊದಲ ಟ್ರ‍್ಯಾಕ್ ಅತೀ ಶೀಘ್ರದಲ್ಲೇ ಅನಾವರಣಗೊಳಿಸಲು ಸಜ್ಜಾಗಿದ್ದು ಈ ಬಗ್ಗೆ ಅಪ್‌ಡೇಟ್ಸ್ ಸದ್ಯದಲ್ಲೇ ಹೊರಬೀಳುವ ಸಾಧ್ಯತೆಯಿದೆ. ಚಿತ್ರತಂಡದಿಂದ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

error: Content is protected !!