ಬಂದಾರು : ಹಲವಾರು ವರ್ಷಗಳ ಬಹುಬೇಡಿಕೆಯ ಬಸ್ ನಿಲ್ದಾಣ ಲೋಕಾರ್ಪಣೆ: ಮೈರೋಳ್ತಡ್ಕದ ವಿವೇಕಾನಂದ ನಗರದಲ್ಲಿ ನೂತನ ಬಸ್ ತಂಗುದಾಣ

ಬಂದಾರು : ಚಾಮುಂಡೇಶ್ವರಿ ಯುವಕ ಮಂಡಲ, ಶ್ರೀ ಕ್ಷೇತ್ರ ಮುಂಡೂರು ಇದರ ಪ್ರಾಯೋಜಕತ್ವದಲ್ಲಿ ಬಂದಾರು ಗ್ರಾಮದ ಮೈರೋಳ್ತಡ್ಕದ ವಿವೇಕಾನಂದ ನಗರದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಬಸ್ ತಂಗುದಾಣ ಮಾ. 17 ರಂದು ಲೋಕಾರ್ಪಣೆಗೊಂಡಿತು.

ಪ್ರಗತಿಪರ ಕೃಷಿಕರು ಕೊಡುಗೈ ದಾನಿ ಶ್ರೀಪತಿ ಭಟ್ ಮುಂಡೂರು ಇವರು ದೀಪ ಬೆಳಗಿ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು. ಬಳಿಕ ರಾಮಫಲ ಗಿಡ ವಿತರಿಸಿ ನೂತನ ಬಸ್ ನಿಲ್ದಾಣದ ಬಳಿ ಗಿಡ ನೆಟ್ಟು, ನಿಲ್ದಾಣದ ಸುತ್ತ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಚಿತ್ರಣ ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಮುಂಡೂರು ಧರ್ಮಧರ್ಶಿಗಳಾದ ಆನಂದ ಗೌಡ, ಮೈರೋಳ್ತಡ್ಕ ಶಿವಶಕ್ತಿ ಜನರಲ್ ಸ್ಟೋರ್ ಮಾಲಕರಾದ ಗುರುಪ್ರಸಾದ್ ಕುರಾಯ, ಶ್ರೀ ಚಾಮುಂಡೇಶ್ವರಿ ಯುವಕ ಮಂಡಲ ಅಧ್ಯಕ್ಷರಾದ ಅಶ್ವಥ್ ಗೌಡ, ಕಾರ್ಯದರ್ಶಿ ಉದಯ ಮಿತ್ಯೋಡಿ, ಊರಿನ ಹಿರಿಯರು, ಪ್ರಮುಖರು ಹಾಗೂ ಪದಾಧಿಕಾರಿಗಳು, ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!