‘ಈ ಸಲ ಕಪ್ ನಮ್ದೆ: ಆರ್‌ಸಿಬಿ ಅಭಿಮಾನಿಗಳ ದಶಕದ ಕನಸು ಈಡೇರಿದೆ’: ಕ್ರಿಕೆಟ್ ಪ್ರೇಮಿ ಸಿಎಂ ಸಿದ್ದರಾಮಯ್ಯ ಟ್ವೀಟ್!

ಬೆಂಗಳೂರು: ಎಲ್ಲೆಡೆ ಚೊಚ್ಚಲ ಕಪ್ ಗೆದ್ದ ಮಹಿಳಾ ಆರ್‌ಸಿಬಿ ತಂಡದ್ದೆ ಸುದ್ದಿಯಾಗುತ್ತಿದೆ. ಆರ್ ಸಿಬಿ ಅಭಿಮಾನಿಗಳಂತೂ ಸಂಸತದಲ್ಲಿ ತೇಲಾಡುತ್ತಿದ್ದಾರೆ. ಅನೇಕರ ವಾಟ್ಸಾಪ್ ಸ್ಟೇಟಸ್, ಇನ್‌ಸ್ಟಾ, ಫೆಸ್ ಬುಕ್ ಇನ್ನೀತರ ಸಾಮಾಜಿಕ ಜಾಲತಾಣದಲ್ಲಿ ಕಪ್ ಗೆದ್ದ ಮಹಿಳಾ ಆರ್‌ಸಿಬಿ ತಂಡದ ಫೋಟೋ ಹರಿದಾಡುತ್ತಿದೆ. ಈ ಮಧ್ಯೆದ ರಾಜ್ಯದ ಸಿಎಂ ‘ಈ ಸಲ ಕಪ್ ನಮ್ದೆ’ ಎಂದು ಟ್ವಿಟ್ ಮಾಡಿದ್ದಾರೆ.

ಮಾ.17 ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯದಲ್ಲಿ ದೆಹಲಿ ತಂಡವನ್ನು ಮಣಿಸಿ ಆರ್‌ಸಿಬಿ ತಂಡ ಚೊಚ್ಚಲ ಕಪ್ ಎತ್ತಿ ಹಿಡಿದಿದೆ. ಈ ಬಗ್ಗೆ ಟ್ವೀಟ್ ಮಾಡಿದ ಕರ್ನಾಟಕ ಸಿಎಂ ಸಿದ್ದರಾಮಯ್ಯ, ‘ಇಡೀ ಪಂದ್ಯಾವಳಿಯುದ್ದಕ್ಕೂ ಸಂಘಟಿತ ಪ್ರದರ್ಶನ ನೀಡಿರುವ ನಮ್ಮ ಹುಡುಗಿಯರ ಆಟ ಅಭಿನಂದನಾರ್ಹ. ಕ್ರಿಕೆಟ್ ಪ್ರೇಮಿಯಾದ ನನಗೆ ಈ ಗೆಲುವು ಅತ್ಯಂತ ಖುಷಿಕೊಟ್ಟಿದೆ. ಆರ್‌ಸಿಬಿ ಅಭಿಮಾನಿಗಳ ದಶಕಗಳ ಕನಸು ಈಡೇರಿದೆ. ಐಪಿಎಲ್‌ನಲ್ಲಿ ನಮ್ಮ ಹುಡುಗರೂ ಕಪ್ ಗೆಲ್ಲಲಿ ಎಂಬ ಹಾರೈಕೆ ನನ್ನದು. ಈ ಸಲ ಕಪ್ ನಮ್ದೆ’ ಎಂದು ಬರೆದಿದ್ದಾರೆ.

error: Content is protected !!