ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ರಾಜ್ಯ ಮಟ್ಟದ ಬಿ. ವೋಕ್ ಉತ್ಸವ:ಬೆಳ್ತಂಗಡಿ ಗುರುದೇವ ಕಾಲೇಜಿಗೆ ಪ್ರಶಸ್ತಿ: ವಿದ್ಯಾರ್ಥಿಗಳ ಸಾಧನೆಗೆ ಅಧ್ಯಕ್ಷ ವಸಂತ ಬಂಗೇರ ಮೆಚ್ಚುಗೆ:

 

 

ಬೆಳ್ತಂಗಡಿ : ಉಜಿರೆ ಎಸ್ ಡಿ ಎಂ ಸ್ನಾತಕೋತ್ತರ ವಿಭಾಗದಲ್ಲಿ ಬಿ ವೋಕ್ ವಿಭಾಗದ ವತಿಯಿಂದ ನಡೆದ ‘ಬಿ. ವೋಕ್ ಉತ್ಸವ’ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ಉತ್ತಮ ಸಾಧನೆಗೈದ ಪ್ರಶಸ್ತಿಯನ್ನು ಪಡೆದುಕೊಂಡಿದೆ

ಪ್ಯಾಷನ್ ಶೋ ಸ್ಪರ್ಧೆಯಲ್ಲಿ 24 ಕಾಲೇಜುಗಳ ಸ್ಪರ್ಧೆಯ ಮಧ್ಯೆ ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಹಾಗೂ ಮೂವಿ ಸ್ಪೂಪ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಪ್ರಶಸ್ತಿ ಫಲಕದ ಜತೆ ನಗದು ಬಹುಮಾನ ಗಳಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಸಂಸ್ಥೆಯ ಅಧ್ಯಕ್ಷರಾದ ಕೆ.ವಸಂತ ಬಂಗೇರ ಅಭಿನಂದಿಸಿದರು. ಈ ಸಂದರ್ಭ
ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ, ವಾಣಿಜ್ಯ ವಿಭಾಗದ ಉಪನ್ಯಾಸಕ ಶಮೀವುಲ್ಲಾ ಬಿ.ಎ., ಕಾಲೇಜಿನ ಉಪನ್ಯಾಸಕರು ಹಾಗೂ ಸಾಂಸ್ಕೃತಿಕ ಸಮಿತಿ ನಿರ್ದೇಶಕರಾದ ಸತೀಶ್ ಹಾಗೂ ದೀಪ್ತಿ ಇದ್ದರು

error: Content is protected !!