ಬೆಳ್ತಂಗಡಿ: 2007 ರಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಪೆರೋಲ್ ಮೇಲೆ ತೆರಳಿದ್ದ ಅಸಾಮಿ, ಆರೋಪಿ ಸುಹೇಲ್ ಅಲಿಯಾಸ್ ಮೊಹಮ್ಮದ್ ಅಯಾಜ್ 15 ವರ್ಷಗಳ ಬಳಿಕ ಪತ್ತೆಯಾಗಿದ್ದಾನೆ. ಸದ್ಯ ಈತನನ್ನು ಮಡಿವಾಳ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕೊಲೆ, ಕಳವು, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಖತರ್‌ನಾಕ್ 30 ದಿನ ಪೆರೋಲ್ ಮೇಲೆ ಬಂದು ಬಳಿಕ ತಲೆಮರೆಸಿಕೊಂಡಿದ್ದ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ತಲೆಮರೆಸಿಕೊಂಡಿದ್ದ ಸುಹೇಲ್ ತನ್ನ ಹೆಸರನ್ನು ಮಹಮ್ಮದ್ ಅಯಾಜ್ ಎಂದು ಬದಲಿಸಿಕೊಂಡು ಆಯುರ್ವೇದಿಕ್ ಮೆಡಿಸಿನ್ ಬಿಜಿನೆಸ್ ಮಾಡಿಕೊಂಡಿದ್ದ. ಈತನ ಪತ್ತೆಗೆ ಪೊಲೀಸರು ಖರ್ಚು ಬರೋಬ್ಬರಿ 10 ಲಕ್ಷ ರೂ ಹಣ ಖರ್ಚು ಮಡಿದ್ದಲ್ಲದೇ 15 ವರ್ಷಗಳ ಕಾಲ ಈತನಿಗಾಗಿ ಹುಡುಕಾಡಿದ್ದಾರೆ. ಸದ್ಯ ಈತ ಬೆಳ್ತಂಗಡಿಯಲ್ಲಿ ಮಡಿವಾಳ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಮತ್ತೆ ಜೈಲು ಪಾಲಾಗಿದ್ದಾನೆ.