ಉಜಿರೆ: ವಿಶ್ವ ವಿಶೇಷ ಚೇತನರ ದಿನಾಚರಣೆಯ ಪ್ರಯುಕ್ತ ಡಿ. 22 ರಂದು ಉಜಿರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ ನಡೆಯಿತು.
ಪಂಚಾಯತ್ ಅಧ್ಯಕ್ಷರಾದ ಪುಷ್ಪಾವತಿ ಆರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆದಿದ್ದು, ಈ ಸಂದರ್ಭದಲ್ಲಿ ಉಜಿರೆ ಗ್ರಾಮದ ವಿಶೇಷ ಚೇತನರಾದ ಕುಮಾರಿ ಶಮಾ ಇವರಿಗೆ ಪಂಚಾಯತ್ ವತಿಯಿಂದ ಸ್ಟಡಿ ಟೇಬಲ್ ಹಾಗೂ 30 ವಿಶೇಷ ಚೇತನರಿಗೆ UDID ಕಾರ್ಡ್ ಪ್ರತಿಯನ್ನು ವಿತರಿಸಲಾಯಿತು . ಈ ಸಭೆಯಲ್ಲಿ 80 ಜನ ವಿಶೇಷ ಚೇತನರು ಹಾಜರಿದ್ದು ಸಮನ್ವಯ ಗ್ರಾಮ ಸಭೆಯನ್ನು ಯಶಸ್ವಿಗೊಳಿಸಿದರು.
ಈ ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ರವಿ ಕುಮಾರ್ ಬರಮೇಲು, ಪಂಚಾಯತ್ ಸದಸ್ಯರು, ಪಿಡಿಒ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಶ್ರವಣ್, ತಾಲೂಕು ಪಂಚಾಯತ್ ವಿಶೇಷ ಚೇತನರ ವಿವಿಧೋದ್ದೇಶ ಸಂಯೋಜಕರಾದ ಜೋನ್ ಬ್ಯಾಪ್ಟಿಸ್ಟ್ , ವಿ.ಅರ್.ಡಬ್ಲ್ಯೂ. ವಿಪುಲ್, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಸೀತಾ ಆರ್ ಶೆಟ್, ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ಮೇಲ್ವಿಚಾರಕರಾದ ಮಲ್ಲಿಕಾ, ಅಂಗನವಾಡಿ ಕಾರ್ಯ ಕರ್ತೆ ಯರು ಹಾಗೂ ಆಶಾ ಕಾರ್ಯಕರ್ತೆಯರು, ರಾಷ್ಟ್ರ ಪ್ರಶಸ್ತಿ ವಿಜೇತೆಯಾರಾದ ಅಂಜನಾ ದೇವಿ, ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.