ಬಂದಾರು ಗ್ರಾಮ ಪಂಚಾಯತ್ ಜನಸ್ನೇಹಿ ಉದ್ಯೋಗ ಖಾತ್ರಿ ಡಾಟಾ ಎಂಟ್ರಿ ಸಿಬ್ಬಂದಿ ನಿಧನ: ಅನಾರೋಗ್ಯದಿಂದ ವಿಧಿವಿಶರಾದ ಲಲಿತ

ಮೊಗ್ರು: ಬಂದಾರು ಗ್ರಾಮ ಪಂಚಾಯತ್ ಜನಸ್ನೇಹಿ ಉದ್ಯೋಗ ಖಾತ್ರಿ ಡಾಟಾ ಎಂಟ್ರಿ ಸಿಬ್ಬಂದಿಯಾಗಿ ಕಳೆದ 14 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಮೊಗ್ರು ಗ್ರಾಮದ ನಾಯಿಮಾರು ಲಲಿತ (38ವ) ಇವರು ಅನಾರೋಗ್ಯದಿಂದ ಡಿ.15ರಂದು ಬೆಳಗ್ಗೆ ಸ್ವಗೃಹದಲ್ಲಿ ವಿಧಿವಿಶರಾಗಿದ್ದಾರೆ.

ಗ್ರಾಮಸ್ಥರಿಗೆ ನಗುಮೊಗದ ಸೇವೆ ನೀಡುತ್ತಿದ್ದ ಇವರು ಜನರ ಅಪಾರ ಪ್ರೀತಿಗೆ ಪಾತ್ರರಾಗಿದ್ದರು. ಗ್ರಾ.ಪಂ. ಅಧ್ಯಕ್ಷರಾದ ಪರಮೇಶ್ವರಿ ಗೌಡ, ಉಪಾಧ್ಯಕ್ಷರಾದ ಗಂಗಾಧರ, ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಗ್ರಾ.ಪಂ. ಸದಸ್ಯರು ಸಿಬ್ಬಂದಿ ವರ್ಗ ಹಾಗೂ ಊರಿನ ಗಣ್ಯರು ಸಂತಾಪ ಸಲ್ಲಿಸಿದ್ದಾರೆ.

ಮೃತರು ಪತಿ ಲವ, ಗಂಡು ಮಕ್ಕಳಾದ ಸ್ವಸ್ತಿಕ್, ಸಾಕ್ಷಿತ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

error: Content is protected !!